ಆರೆಸ್ಸೆಸ್ ಬೆದರಿಕೆ ಕರೆ ಎಂದು ತೋರಿಸಿದ ಪ್ರಿಯಾಂಕ್ ಖರ್ಗೆಗೆ ನಿಮ್ಮ ನಂಬರ್ ಸುಲಭಕ್ಕೆ ಸಿಗುತ್ತಾ ಎಂದು ಪ್ರಶ್ನಿಸಿದ ಪಬ್ಲಿಕ್

Krishnaveni K

ಬುಧವಾರ, 15 ಅಕ್ಟೋಬರ್ 2025 (14:01 IST)
ಬೆಂಗಳೂರು: ಆರೆಸ್ಸೆಸ್ ನವರು ಬೆದರಿಕೆ ಕರೆ ಮಾಡಿ ಯಾವ ರೀತಿ ಕೆಟ್ಟ ಪದ ಬಳಕೆ ಮಾಡ್ತಾರೆ ನೋಡಿ ಎಂದು ತಮ್ಮ ಮೊಬೈಲ್ ಗೆ ಬಂದ ಕರೆಯೊಂದನ್ನು ವಿಡಿಯೋ ಮಾಡಿ ಟ್ವೀಟ್ ಮಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆಯನ್ನು ಪಬ್ಲಿಕ್ ಮತ್ತೆ ಟ್ರೋಲ್ ಮಾಡಿದ್ದು ನಿಮ್ಮ ನಂಬರ್ ಅಷ್ಟು ಸುಲಭವಾಗಿ ಸಿಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಆರೆಸ್ಸೆಸ್ ಚಟುವಟಿಕೆಗೆ ನಿಯಂತ್ರಣ ಹೇರಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಕ್ಕೆ ಕೆಲವರು ನನಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರು ತಮಗೆ ಕರೆ ಮಾಡಿ ನಿಂದಿಸಿದ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಹಾಕಿದ್ದಾರೆ. ಯಾರೋ ಸಾರ್ವಜನಿಕರಿಗೆ ನಿಮ್ಮ ನಂಬರ್ ಇಷ್ಟು ಸುಲಭವಾಗಿ ಸಿಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೆಲ್ಲಾ ಈ ರೀತಿ ಯಾರೋ ಜನ ಸಾಮಾನ್ಯರಂತೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಬದಲು ಆ ನಂಬರ್ ಯಾರದ್ದೆಂದು ನೀವೇ ಪೊಲೀಸರಿಗೆ ಹೇಳಿ ತನಿಖೆ ಮಾಡಬಹುದಲ್ವೇ? ಎಂದು ಪ್ರಶ್ನೆ ಮಾಡಿದ್ದಾರೆ.

ತಮ್ಮ ಮೊಬೈಲ್ ನಲ್ಲಿ ಆ ವ್ಯಕ್ತಿಯ ಕರೆ ತೋರಿಸುವಾಗ ಪ್ರಿಯಾಂಕ್, ನಂಬರ್ ಹೈಡ್ ಮಾಡಿದ್ದರು. ಇದನ್ನೂ ನೆಟ್ಟಿಗರು ಪ್ರಶ್ನಿಸಿದ್ದಾರೆ. ನಿಮಗೆ ಬೆದರಿಕೆ ಹಾಕಿದ ವ್ಯಕ್ತಿಯ ನಂಬರ್ ಹೈಡ್ ಮಾಡುವ ಅಗತ್ಯವೇನಿದೆ ಎಂದಿದ್ದಾರೆ.

ಇನ್ನು ಕೆಲವರು ತಾವೇ ಆ ನಂಬರ್ ಪತ್ತೆ ಮಾಡಿ ಟ್ರೂ ಕಾಲರ್ ನಲ್ಲಿ ಆತನ ಹೆಸರನ್ನೂ ಪತ್ತೆ ಮಾಡಿ ಈತ ಬಹುಶಃ ಕಲಬುರಗಿ ಜಿಲ್ಲೆಯವನೇ. ಗೃಹಸಚಿವರೇ ಈ ನಂಬರ್ ನ ಮಾಲಿಕ ಯಾರು ಎಂದು ಪತ್ತೆ ಮಾಡಿ ಆಗ್ರಹಿಸಿದ್ದಾರೆ. ಇಷ್ಟೆಲ್ಲಾ ಡ್ರಾಮಾ ಮಾಡುವ ಬದಲು ಸೈಬರ್ ಪೊಲೀಸರಿಗೆ ಹೇಳಿದರೆ ಒಂದು ಗಂಟೆಯಲ್ಲಿ ಹಿಡಿತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ