ಆರ್ ಆರ್ ನಗರ ಬಿಎಂಟಿಸಿ ಡಿಪೋ ಮುಂದೆ ಬಿಎಂಟಿಸಿ ನೌಕರ ಹೊಳೆಬಸಪ್ಪ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತ ಹೊಳೆಬಸಪ್ಪ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಧರಣಿ ನಡೆಸುತ್ತಿದ್ದು ಕೆಆರ್ಎಸ್ ಪಾರ್ಟಿ ಮತ್ತು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆಗೆ ಸಾಥ್ ಕೊಟ್ಟಿದ್ದಾರೆ. ನೂರಾರು ಸಂಖ್ಯೆಯಲ್ಲಿ ನೌಕರರು ಜಮಾಯಿಸಿ ಸ್ಥಳಕ್ಕೆ ಸಾರಿಗೆ ಸಚಿವರು ಬರುವಂತೆ ಪಟ್ಟು ಹಿಡಿದಿದ್ದಾರೆ. ಹಾಗೂ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಬಂಧಿಸಬೇಕು ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಬಿಎಂಟಿಸಿ ನೌಕರ ಆತ್ಮಹತ್ಯೆ ಮಾಡಿಕೊಂಡ್ರು ಸ್ಥಳಕ್ಕೆ ಸಚಿವರು ಬಂದಿಲ್ಲ. ಒಬ್ಬ ನೌಕರ, ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೌಜನಕ್ಕೂ ಸಾರಿಗೆ ಸಚಿವ ಶ್ರೀ ರಾಮುಲು, ಬಿಎಂಟಿಸಿ ಎಂಡಿ ಜಿ. ಸತ್ಯವತಿ ಹಾಗೂ ನಂದೀಶ್ ರೆಡ್ಡಿ ಭೇಟಿ ನೀಡಿಲ್ಲ. ಸಾವಿಗೆ ಕಾರಣನಾದ ಡಿಪೋ ಮ್ಯಾನೇಜರ್ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆತನಿಗೆ ಪಕ್ಕದ ಡಿಪೋ ಗೆ ಶಿಫ್ಟ್ ಮಾಡಿ ಸೇಫ್ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.