ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ವ್ಯಕ್ತಿಯ ಬಂಧನ

ಶನಿವಾರ, 24 ಆಗಸ್ಟ್ 2019 (11:50 IST)
ಮುಂಬೈ : ಬೀದಿಯಲ್ಲಿರುವ ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.
ಈ ವ್ಯಕ್ತಿ ಮುಂಬೈನ ಖರಗರ್‍ ನಲ್ಲಿ ಬೀದಿಯಲ್ಲಿ ಮಲಗಿದ್ದ ಹೆಣ್ಣು ನಾಯಿ ಮೇಲೆ ಅತ್ಯಾಚಾರ ಎಸಗುತ್ತಿದ್ದು, ಈ ಹಿನ್ನಲೆಯಲ್ಲಿ ಈ ವ್ಯಕ್ತಿಯ ವಿರುದ್ಧ ಪೆಟಾ ಸಂಸ್ಥೆಯವರು ದೂರು ನೀಡಿದ್ದಾರೆ.


ಐಪಿಸಿ ಸೆಕ್ಷನ್ 377(ಪ್ರಾಣಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸುವುದು) ಅಡಿ ಎಫ್‍.ಐ.ಆರ್ ದಾಖಲಾಗಿದ್ದು, ಈ ದೂರಿನ ಹಿನ್ನೆಲೆಯಲ್ಲಿ ಆಗಸ್ಟ್ 22 ರಂದು ನವ ಮುಂಬೈ ಹಾಗೂ ಪನ್ವೆಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ