ಈ ದಿನದಂದು ಬಿಡುಗಡೆಯಾಗಲಿದೆ ರಿಲಯನ್ಸ್‌ ಜಿಯೊ ಫೈಬರ್‌ ಸೇವೆ

ಬುಧವಾರ, 14 ಆಗಸ್ಟ್ 2019 (09:07 IST)
ಮುಂಬೈ : ಹತ್ತಾರು ಆಕರ್ಷಕ ಕೊಡುಗೆಗಳನ್ನು ಹೊಂದಿರುವ  ಬಹುನಿರೀಕ್ಷಿತ ರಿಲಯನ್ಸ್‌ ಜಿಯೊ ಫೈಬರ್‌ ಸೇವೆಯು ಸೆಪ್ಟೆಂಬರ್‌ 5ರಿಂದ ದೇಶದಾದ್ಯಂತ ಜಾರಿಗೆ ಬರಲಿದೆ.




ಸೋಮವಾರ ನಡೆದ ಸಂಸ್ಥೆಯ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಬಹುನಿರೀಕ್ಷಿತ ಜಿಯೊಫೈಬರ್‌ನ ವಾಣಿಜ್ಯ ಸೇವೆಗೆ ಸೆ. 5ರಂದು ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.


'ಫೈಬರ್‌ ಟು ದ ಹೋಂ' (ಎಫ್‌ಟಿಟಿಎಚ್‌) ಸೇವೆಯಡಿ ಕನಿಷ್ಠ 100 ಎಂಬಿಪಿಎಸ್‌ ಮತ್ತು ಗರಿಷ್ಠ 1,000 ಎಂಬಿಪಿಎಸ್‌ (1 ಜಿಬಿಪಿಎಸ್‌) ಬ್ರಾಡ್‌ಬ್ಯಾಂಡ್‌ ಸೌಲಭ್ಯ. ಮಾಸಿಕ ಶುಲ್ಕ ಕನಿಷ್ಠ 700 ರಿಂದ ಗರಿಷ್ಠ ₹ 10 ಸಾವಿರವರೆಗಿನ ಆಕರ್ಷಕ ಸೌಲಭ್ಯ. ಡಿಜಿಟಲ್‌ ಸಾಧನಗಳು ಪರಸ್ಪರ ಸಂಪರ್ಕ ಸಾಧಿಸುವ ಇಂಟರ್‌ ನೆಟ್‌ ಆಫ್‌ ಥಿಂಗ್ಸ್ (ಐಒಟಿ) ಮತ್ತು ಜಿಯೊ ಹೋಂ ಟಿವಿ ಸೇವೆ ಪರಿಚಯಿಸಲಾಗುತ್ತಿದೆ.  ಎಚ್‌ಡಿ ಟಿವಿಯಲ್ಲಿ ವಿಶಿಷ್ಟ ಅನುಭವ ನೀಡುವ ಮನರಂಜನೆ ಕಾರ್ಯಕ್ರಮ, ಧ್ವನಿ ಆಧಾರಿತ ಸೇವೆಗಳು, ಗೇಮಿಂಗ್‌, ಡಿಜಿಟಲ್‌ ಶಾಪಿಂಗ್‌ ಮತ್ತು ಸ್ಮಾರ್ಟ್‌ ಹೋಂ ಸೌಲಭ್ಯಗಳನ್ನು ಇದು ಒಳಗೊಂಡಿರಲಿದೆ.


ಇದರ ಜೊತೆಗೆ ಲ್ಯಾಂಡ್‌ಲೈನ್ ಫೋನ್ ಸಂಪರ್ಕ ಒದಗಿಸಲಾಗುವುದು. ಇದರಿಂದ ಮಾಡುವ ಸ್ಥಳೀಯ ಹಾಗೂ ದೇಶೀಯ ಕರೆಗಳು ಉಚಿತವಾಗಿರುತ್ತವೆ. ಮಾಸಿಕ ರೂ 500ಕ್ಕೆ ಅಮೆರಿಕ ಮತ್ತು ಕೆನಡಾಕ್ಕೆ ಮಿತಿರಹಿತ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಈ ಸೇವೆಯ ಬಳಕೆದಾರರಿಗೆ ಹೆಚ್ಚುವರಿ ಸೌಲಭ್ಯಗಳ 'ಜಿಯೊ ಪೋಸ್ಟ್‌ ಪೇಡ್ ಪ್ಲಸ್' ಮೊಬೈಲ್ ಸೇವೆ ಪರಿಚಯಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ