ಧರ್ಮಸ್ಥಳ ಬುರುಡೆ ರಹಸ್ಯ: ಮಾಸ್ಕ್‌ಮ್ಯಾನ್‌ ಕೊಟ್ಟ ಆ ಒಂದು ಹೇಳಿಕೆಯಿಂದ ಅಣ್ಣನೂ ಲಾಕ್‌

Sampriya

ಶನಿವಾರ, 23 ಆಗಸ್ಟ್ 2025 (16:40 IST)
ಮಂಗಳೂರು: ಹಣಕ್ಕಾಗಿ ಧರ್ಮಸ್ಥಳದ ಸುತ್ತಾ ಮುತ್ತಾ ಹತ್ತಾರು ಶವಗಳನ್ನು ಹೂತಿಟ್ಟಿರುವುದಾಗಿ ಸುಳ್ಳು ಆರೋಪ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಮಾಸ್ಕ್‌ಮ್ಯಾನ್‌ನ ಅಣ್ಣ ತಾನಾಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇಂದು ಬೆಳಗ್ಗೆ ತಾನಾಸಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಸ್‌ಐಟಿ ಚಿನ್ನಯ್ಯನ ವಿಚಾರಣೆ ನಡೆಸುತ್ತಿದ್ದ ವೇಳೆ ತಾನು ಹೆಣ ಹೂಳುತ್ತಿರುವ ವಿಚಾರ ಅಣ್ಣ ತಾನಾಸಿಗೂ ತಿಳಿದಿತ್ತು ಎಂದು ಹೇಳಿದ್ದ. 

ಈ ಕಾರಣಕ್ಕೆ ತಾನಾಸಿಯನ್ನು ಎಸ್‌ಐಟಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ವಶಕ್ಕೆ ಪಡೆದ ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟ್‌ 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ. 

ಶುಕ್ರವಾರ ವಿಚಾರಣೆಗೆ ಬಂದಿದ್ದ ಚಿನ್ನಯ್ಯನಿಗೆ ಎಸ್‌ಐಟಿ ಪೊಲೀಸರು ನಿರಂತರ ಪ್ರಶ್ನೆ ಕೇಳಿದ್ದರು. ರಾತ್ರಿಯೂ ಬೆಳ್ತಂಗಡಿ ಠಾಣೆಯಲ್ಲೇ ಇದ್ದ ಚಿನ್ನಯ್ಯನನ್ನು ಇಂದು ಬೆಳಗ್ಗೆ ಬಂಧಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ