ಮಾಸ್ಕ್ ಮ್ಯಾನ್ ಚಿನಯ್ಯ ಸಿಕ್ಕಿಬಿದ್ದಿದ್ದು ಹೇಗೆ, ಪ್ರಣಬ್ ಮೊಹಂತಿ ಎದುರು ಏನಾಗಿತ್ತು ನೋಡಿ

Krishnaveni K

ಶನಿವಾರ, 23 ಆಗಸ್ಟ್ 2025 (16:18 IST)
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ನಾಟಕವಾಡಿ ಸಿಕ್ಕಿಬಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಸಿಕ್ಕಿಬೀಳಲು ಆತನ ಈ ಒಂದು ಹೇಳಿಕೆಯೇ ಕಾರಣವಾಯ್ತು ಎನ್ನಲಾಗಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಎಸ್ಐಟಿ ತಂಡವನ್ನು ಎರಡು ವಾರ ನಿರಂತರವಾಗಿ ಕಾಡು-ಮೇಡಿನಲ್ಲಿ ಅಲೆದಾಡಿ ಮಣ್ಣು ಅಗೆದು ಡ್ರಾಮಾ ಮಾಡಿದ್ದ ಚಿನ್ನಯ್ಯ ಈಗ ನಿಜಾಂಶ ಬಾಯ್ಬಿಟ್ಟು ಸಿಕ್ಕಿಬಿದ್ದಿದ್ದಾನೆ. ಆತ ಮೊದಲು ನನಗೆ ತಮಿಳುನಾಡಿನಲ್ಲಿ ಗುಂಪೊಂದು ಬಂದು ಈ ರೀತಿ ಹೇಳಿಕೆ ನೀಡು ಎಂದು ಹೇಳಿದ್ದರು ಎಂದಿದ್ದ.

ನಿನ್ನೆಯಿಂದ ಆತನನ್ನು ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ನೇತೃತ್ವದ ತಂಡ ತನಿಖೆ ನಡೆಸುತ್ತಿತ್ತು. ಆದರೆ ಆತ ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಇದ್ದಿದ್ದರಿಂದ ಬಂಧಿಸಲಾಗುತ್ತಿರಲಿಲ್ಲ. ಆದರೆ ವಿಚಾರಣೆ ವೇಳೆ ಆತ ಬುರುಡೆ ರಹಸ್ಯ ಬಾಯ್ಬಿಟ್ಟಿದ್ದ.

ದೂರು ನೀಡಲು ಬಂದಾಗ ತನಗೆ ನೀಡಿದ್ದ ಬುರುಡೆ ಕೂಡಾ ಯಾರೋ ಕೊಟ್ಟಿದ್ದು. ಇದನ್ನು ನಾನು ಅಗೆದು ತಂದಿದ್ದಲ್ಲ. ನನಗೆ ಹೀಗೆ ಹೇಳಲು ಹೇಳಿದ ಗುಂಪಿನವರೇ ಬುರುಡೆ ತಂದುಕೊಟ್ಟಿದ್ದರು ಎಂದು ಬಾಯ್ಬಿಟ್ಟಿದ್ದಾನೆ. ಹೀಗಾಗಿ ಆತನ ಬಂಧನಕ್ಕೆ ಪ್ರಣಬ್ ಮೊಹಂತಿ ನೇತೃತ್ವದ ತಂಡ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿಯಿಂದ ಆತನನ್ನು ಮುಕ್ತಗೊಳಿಸಿ ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ