ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರದೇಶದಿಂದ ಮಾನವನ ಅವಶೇಷಗಳನ್ನು ಹೊರತೆಗೆಯಲು ವೈದ್ಯರ ತಂಡದೊಂದಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಕಾರ್ಯಾಚರಣೆ ನಡೆಸಿದ್ದು ಇದೀಗ ಒಂದನೇ ಪಾಯಿಂಟ್ಸ್‌ನಲ್ಲಿ ಹುಡುಕಾಟ ಅಂತ್ಯ ಮಾಡಲಾಗಿದೆ.
ಮೊದಲ ದಿನದ ಕಾರ್ಯಚರಣೆಯಲ್ಲಿ ಕಾರ್ಮಿಕರನ್ನು ಬಳಸಿ ಮೊದಲು ಮಣ್ಣು ತೆಗೆಯಲಾಯಿತು. ಆದರೆ ನೀರಿನ ಒರತೆ ಹಿನ್ನೆಲೆ ಮಧ್ಯಾಹ್ನದ ನಂತರ ಜೆಸಿಬಿ ಮೂಲಕ ಕಾರ್ಯಚರಣೆಯನ್ನು ಮುಂದುವರೆಸಲಾಯಿತು. ಹುಡುಕಾಟಕ್ಕೆ ಶ್ವಾನ ಪಡೆಯನ್ನು ಕರೆತರಲಾಯಿತು. ಆದರೆ ಈಗಾಗಲೇ 8 ಅಡಿಯಷ್ಟು ಮಣ್ಣನ್ನು ಹೊರತೆಗೆಯಲಾಯಿತು ಆದರೆ ಇದುವರೆಗೆ ಕಳೆಬರಹ ಪತ್ತೆಯಾಗಿಲ್ಲ, ಇನ್ನೂ ಸಮಯ 6 ಆಗಿರುವುದರಿಂದ ಕಾರ್ಯಚರಣೆಯನ್ನು ಅಂತ್ಯಗೊಳಿಸಲಾಗಿದೆ.
ಬೆಳಕಿನ ಹಾಗೂ ಕಾನೂನಿನಲ್ಲಿ ರಾತ್ರಿ ವೇಳೆ ಮಣ್ಣು ಅಗೆಯಲು ಅನುಮತಿ ಇಲ್ಲದಿರುವುದರಿಂದ ಇದೀಗ ಮೊದಲ ದಿನದ ಕಾರ್ಯಚರಣೆಯನ್ನು ಮುಗಿಸಲಾಗಿದೆ.