ಬೆಂಗಳೂರು: ಇದೇ 15, 16 ಹಾಗೂ 17ರಂದು ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ.
ಬೆಂಗಳೂರಿನ ಜೀವನಾಡಿಯಾಗಿರುವ ಕಾವೇರಿ ನೀರು ಸರಬರಾಜಿನಲ್ಲಿ ಕಾಮಗಾರಿ ಹಿನ್ನೆಲೆ ಮೂರು ದಿನ ನೀರು ಬರುವುದಿಲ್ಲ. ಈ ಹಿನ್ನೆಲೆ ಇಂದೇ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿ ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿದೆ. ಈ ಕುರಿತು ಜಲಮಂಡಳಿ ಅಧಿಕೃತ ಮಾಹಿತಿ ನೀಡಿದೆ.
ಮನವಿಯಲ್ಲಿ ಹೀಗಿದೆ: 3 ದಿನ ಮನೆಗಳಿಗೆ ಕಾವೇರಿ ನೀರು ಬರಲ್ಲ. ನಾಳೆ, ನಾಡಿದ್ದು ಹಾಗೂ ಸೆಪ್ಟೆಂಬರ್ 17ರಂದು ಮನೆಗಳಿಗೆ ಕಾವೇರಿ ನೀರು ಬರಲ್ಲ. ತುರ್ತುಕಾಮಾಗಾರಿ ಹಿನ್ನೆಲೆ ಜಲರೇಚಕ ಯಂತ್ರಗಳ ಸ್ಥಗಿತ ಹಿನ್ನೆಲೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಒಟ್ಟು 60 ಗಂಟೆ ನಿಮ್ಮ ಮನೆಗೆ ಕಾವೇರಿ ನೀರು ಬರೋದಿಲ್ಲ. ಅಗತ್ಯ ನೀರು ಸಂಗ್ರಹಕ್ಕೆ ಸೂಚನೆ
ಮುಂಜಾಗ್ರತೆಯಾಗಿ ಅಗತ್ಯ ನೀರು ಸಂಗ್ರಹಿಸಿಟ್ಟುಕೊಳ್ಳಲು ಜಲಮಂಡಳಿ ಸೂಚನೆ ನೀಡಿದೆ.
ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನ ಖಚಿತಪಡಿಸಿಕೊಳ್ಳಲು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯ ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿ ನಡೆಸ್ತಿದೆ.