ಹೆಂಡತಿ, ಮಕ್ಕಳಿದ್ದರೂ, ಪರ ಸ್ತ್ರೀಯೊಂದಿಗೆ ಸಲ್ಲಾಪ ಬೆಳೆಸಿದ ಗಂಡನಿಗೆ ಪತ್ನಿಯೇ ಧರ್ಮದೇಟು ನೀಡಿರುವ ಘಟನೆ ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ನಡೆದಿದೆ. ಪತ್ನಿ ಯಶೋಧ ಮಹಿಳಾ ಸಂಘದ ಸದಸ್ಯರೊಂದಿಗೆ ಸೇರಿಕೊಂಡು ಪತಿ ಮಲ್ಲಿಕಾರ್ಜುನನಿಗೆ ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ. ಥಳಿತಕ್ಕೊಳಗಾದ ಮಲ್ಲಿಕಾರ್ಜನ 3 ವರ್ಷದಿಂದ ಅನುಸೂಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಹೀಗಾಗಿ ಪತ್ನಿ ಯಶೋಧ ಗಂಡನ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.