ಧರ್ಮಸಿಂಗ್ ಅಂತ್ಯಸಂಸ್ಕಾರ: ಜೇವರ್ಗಿಯಲ್ಲಿ ಭಾರಿ ಪ್ರತಿಭಟನೆ
ಗುರುವಾರ, 27 ಜುಲೈ 2017 (18:18 IST)
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅಂತ್ಯಸಂಸ್ಕಾರವನ್ನು ಕಲಬುರಗಿಯ ನಾಗನಹಳ್ಳಿಯಲ್ಲಿ ನೆರವೇರಿಸಲು ಸಿದ್ದತೆ ನಡೆಯುತ್ತಿರುವಂತೆ, ನೆಲೋಗಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗ್ರಾಮದಲ್ಲಿಯೇ ಅಂತ್ಯಸಂಸ್ಕಾರ ನಡೆಸುವಂತೆ ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ.
ಪ್ರತಿಭಟನಾಕಾರರು ರಾಜ್ಯ ಹೆದ್ದಾರಿಯನ್ನು ಟೈರ್‌ಗಳಿಗೆ ಬೆಂಕಿ ಹಚ್ಚಿ ತಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಧರ್ಮಸಿಂಗ್ ಅವರ ಹುಟ್ಟೂರಾಗಿದ್ದರಿಂದ ಅದೇ ಗ್ರಾಮದಲ್ಲಿಯೇ ಅಂತ್ಯಸಂಸ್ಕಾರ ನಡೆಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಇಂದು ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಬೀದರ್‌ಗೆ ತಂದು ನಂತರ ಕಲಬುರಗಿಗೆ ತರಲಾಗುತ್ತಿದೆ.
ನಗರದ ಆರ್ಯನ್ ಶಾಲೆಯ ಬಳಿ ಧರ್ಮಸಿಂಗ್ ಅವರ ಅಂತ್ಯಸಂಸ್ಕಾರಕ್ಕೆ ಮುಂದಾಗಿರುವುದು ಜೇವರ್ಗಿ ತಾಲೂಕಿನ ನಾಗರಿಕರಿಗೆ ಆಕ್ರೋಶ ಮೂಡಿಸಿದೆ.
ಜೇವರ್ಗಿ ನಾಗರಿಕರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಧರ್ಮಸಿಂಗ್ ಹುಟ್ಟೂರು ನೆಲೋಗಿಯಲ್ಲಿ ಅಂತ್ಯಸಂಸ್ಕಾರದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.