ಧರ್ಮಸ್ಥಳ: ನೇತ್ರಾವತಿ ಬಳಿ ಕಾಡು ಪ್ರದೇಶದಲ್ಲಿ ಶವಗಳಿಗಾಗಿ ಹುಡುಕಾಡುತ್ತಿರುವ ಎಸ್ಐಟಿ ತಂಡಕ್ಕೆ ಇಂದು ಸಿಕ್ಕಿದ್ದೇನು? ಎಲ್ಲರೂ ಕುತೂಹಲದಿಂದ ನೋಡುತ್ತಿರುವ ಧರ್ಮಸ್ಥಳ ಕೇಸ್ ನ ಲೇಟೆಸ್ಟ್ ಅಪ್ ಡೇಟ್ ಇಲ್ಲಿದೆ.
ಅನಾಮಿಕ ವ್ಯಕ್ತ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿಸಿದ್ದರಿಂದ ಸರ್ಕಾರ ಎಸ್ಐಟಿ ರಚಿಸಿ ತನಿಖೆ ನಡೆಸಲು ಆದೇಶಿಸಿತ್ತು. ಅದರಂತೆ ಈಗ ಅನಾಮಿಕ ವ್ಯಕ್ತಿಯನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಆತ ಹೇಳಿದಲ್ಲಿ ಶವಗಳಿಗಾಗಿ ಮಣ್ಣು ಅಗೆದು ಹುಡುಕಾಟ ನಡೆಸಲಾಗುತ್ತಿದೆ.
ನಿನ್ನೆ ಅನಾಮಿಕ ವ್ಯಕ್ತಿ ಹೇಳಿದ ಒಂದು ಜಾಗದಲ್ಲಿ ಸುಮಾರು 8 ಅಡಿಗಳಷ್ಟು ಗುಂಡಿ ತೆಗೆಯಲಾಗಿತ್ತು. ಹಾಗಿದ್ದರೂ ಏನೂ ಸಿಗಲಿಲ್ಲ. ಇಂದು ಆತ ಹೇಳಿದ ಮೂರು ಸ್ಥಳಗಳಲ್ಲಿ ಹುಡುಕಾಟ ನಡೆಸಲು ಎಸ್ಐಟಿ ನಿರ್ಧರಿಸಿದೆ. ಅದರಂತೆ ಇಂದು ಮಧ್ಯಾಹ್ನದವರೆಗೆ ಗುಂಡಿ ಅಗೆದು ನೋಡಿದರೂ ಎರಡನೇ ಸ್ಥಳದಲ್ಲೂ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ.
ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿ ಯಂತ್ರ ಬಳಸಿ ಅಗೆಯಲು ಸಾಧ್ಯವಿಲ್ಲ. ಹೀಗಾಗಿ ಕಾರ್ಮಿಕರನ್ನು ಕರೆಸಿ ಹಾರೆ, ಗುದ್ದಲಿ ಬಳಸಿ ಗುಂಡಿ ತೆಗೆಯಲಾಗಿದೆ. ಹಾಗಿದ್ದರೂ ಎರಡನೇ ಜಾಗದಲ್ಲೂ ಏನೂ ಸಿಗಲಿಲ್ಲ. ಇದೀಗ ಮೂರನೇ ಜಾಗದಲ್ಲಿ ಗುಂಡಿ ಅಗೆಯುವ ಕಾರ್ಯ ಮುಂದುವರಿದಿದೆ.