ಧೋನಿ ಮಗಳ ಸನ್ ಗ್ಲಾಸ್ ನಟ ರಣವೀರ್ ಕಣ್ಣಿಗೆ : ಫೋಟೋ ವೈರಲ್

ಸೋಮವಾರ, 7 ಅಕ್ಟೋಬರ್ 2019 (21:46 IST)
ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿಯ ಮಗಳ ಸನ್ ಗ್ಲಾಸ್ ನ್ನು ಬಾಲಿವುಡ್ ನಟ ರಣವೀರ್ ಹಾಕಿಕೊಂಡಿರೋ ಫೋಟೋ ಸಖತ್ ವೈರಲ್ ಆಗಿದೆ.

ಟೀಂ ಇಂಡಿಯಾ ಮಾಜಿ ನಾಯಕ ಧೋನಿಯೇ ರಣವೀರ್ ಹಾಗೂ ತಮ್ಮ ಮಗಳು ಜೀವಾ ಒಂದೇ ತರ ಇರೋ ಸನ್ ಗ್ಲಾಸ್ ಹಾಕಿಕೊಂಡಿರೋ ಫೋಟೋ ಪೋಸ್ಟ್ ಮಾಡಿದ್ದಾರೆ.

ರಣವೀರ್  ತನ್ನಂತೆಯೇ ಇರೋ ಸನ್ ಗ್ಲಾಸ್ ಹಾಕಿಕೊಂಡಿರೋ ಫೋಟೋ ನೋಡಿದ ಜೀವಾ ನೇರವಾಗಿ ಮಹಡಿ ಮೇಲಿದ್ದ ತನ್ನ ರೂಮಿಗೆ ಹೋಗಿದ್ದಾಳೆ. ಅಲ್ಲಿ ಸನ್ ಗ್ಲಾಸ್ ಹುಡುಕಿದ್ದಾಳೆ. ಕೊನೆಗೆ ತನ್ನ ಸನ್ ಗ್ಲಾಸ್ ಅಲ್ಲೇ ಇರೋದನ್ನು ಕಂಡು ನಸು ನಕ್ಕಿದ್ದಾಳೆ.

ನನ್ನ ಸನ್ ಗ್ಲಾಸ್ ಇಲ್ಲೆ ಇದೆ ಅಂತ ನಾಲ್ಕುವರೆ ವರ್ಷದ ಮಗಳು ಧೋನಿಗೆ ಹೇಳಿದ್ದಾಳೆ. ಮಗಳ ಮುಗ್ಧತೆಯನ್ನು ಕಂಡ ಧೋನಿ ಈಗಿನ ಮಕ್ಕಳು ತುಂಬಾ ತುಂಟರು ಅಂತ ಬರೆದುಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ