ರಾಷ್ಟ್ರಪತಿ ಕೋವಿಂದ್ ಜತೆ ಎಂಎಸ್ ಧೋನಿ ಡಿನ್ನರ್

ಸೋಮವಾರ, 30 ಸೆಪ್ಟಂಬರ್ 2019 (09:23 IST)
ರಾಂಚಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂಎಸ್ ಧೋನಿ ರಾಂಚಿಯ ರಾಜ್ಯಭವನದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ರನ್ನು ಭೇಟಿಯಾಗಿದ್ದಾರೆ.


ಸದ್ಯಕ್ಕೆ ಟೀಂ ಇಂಡಿಯಾದಿಂದ ಬಿಡುವು ಪಡೆದಿರುವ ಧೋನಿ ರಾಂಚಿಗೆ ಬಂದಿಳಿದಿರುವ ನೀಡಿದ ರಾಷ್ಟ್ರಪತಿಗಳನ್ನು ರಾಜಭವನದಲ್ಲಿ ಭೇಟಿಯಾಗಿ ಡಿನ್ನರ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಮೂರು ದಿನಗಳ ಭೇಟಿಗೆ ರಾಂಚಿಗೆ ಬಂದಿಳಿದಿರುವ ರಾಷ್ಟ್ರಪತಿ ಕೋವಿಂದ್ ಭಾರೀ ಮಳೆಯಿಂದಾಗಿ ನಿನ್ನೆ ಅಂದುಕೊಂಡ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಯಿತು. ನಿನ್ನೆ ರಾತ್ರಿ ನಡೆದ ಔತಣಕೂಟದಲ್ಲಿ ಧೋನಿ ರಾಜಭವನಕ್ಕೆ ಆಗಮಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ