ಬೇಸಿಗೆಯಲ್ಲೂ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿವು

ಶನಿವಾರ, 11 ಮಾರ್ಚ್ 2023 (15:47 IST)
ಶಿವಮೊಗ್ಗ : ಬಿರುಬೇಸಿಗೆಯಲ್ಲೂ ಮಳೆಗಾಲದಂತೆ ಧುಮ್ಮಿಕ್ಕಿ ಹರಿಯುತ್ತಿರುವ ಶರಾವತಿ ಜಲಧಾರೆಯನ್ನು ಕಂಡು ಪ್ರವಾಸಿಗರು ಇದೀಗ ಫುಲ್ ಶಾಕ್ ಆಗಿದ್ದಾರೆ.
 
ಕೇವಲ ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಧುಮ್ಮಿಕ್ಕಿ ಭೋರ್ಗರೆಯುತ್ತಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತ ಇದೀಗ ಬೇಸಿಗೆಯಲ್ಲೂ ನಳನಳಿಸುತ್ತಿದೆ. ಆಶ್ಚರ್ಯವಾದರೂ ಇದು ಸತ್ಯ. ಕಡಿದಾದ ಬಂಡೆಗಳ ನಡುವೆ ಶರಾವತಿಯ ನರ್ತನ ಬಿರುಬೇಸಿಗೆಯಲ್ಲೂ ಕಾಣಸಿಗುತ್ತಿದೆ.

ಜೋಗವು ಭಾರತದ ಎರಡನೇ ಹಾಗೂ ವಿಶ್ವದ ಐದನೇ ಅತೀ ಎತ್ತರದ ಜಲಪಾತವಾಗಿದ್ದು, ಸುಮಾರು 900 ಅಡಿ ಎತ್ತರದಿಂದ ಈ ಜಲಪಾತದ ಕಣಿವೆಗಳಲ್ಲಿ ಹಾಲ್ನೊರೆಯಂತೆ ಶರಾವತಿ ಭೋರ್ಗರೆಯುತ್ತಾಳೆ.

ಕೇವಲ ಮುಂಗಾರು ಮಳೆ ಸಂದರ್ಭದಲ್ಲಿ ಮಾತ್ರ ಕಣ್ಮನ ಸೆಳೆಯುವ ಜೋಗ ಜಲಪಾತದಲ್ಲಿ ಇದೀಗ ಬೇಸಿಗೆ ಸಮಯದಲ್ಲೂ ನಯನ ಮನೋಹರವಾಗಿ ಜಲಧಾರೆ ಧುಮ್ಮಿಕ್ಕಿ ಹರಿಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ