ನೀರಿನ ಆತಂಕದಲ್ಲಿದ್ದ ಜನರಿಗೆ ಜಲ ಮಂಡಳಿಯಿಂದ ಮುಂಜಾಗ್ರತೆ

ಗುರುವಾರ, 9 ಮಾರ್ಚ್ 2023 (14:17 IST)
ಬೇಸಿಗೆ ಶುರುವಾಯಿತು ಅಂತಾ  ನೀರಿನ ಆತಂಕದಲ್ಲಿದ್ದ ಜನರಿಗೆ ಜಲ ಮಂಡಳಿಯಿಂದ ಮುಂಜಾಗ್ರತೆ ಕ್ರಮವಹಿಸುವಂತೆ ಹೇಳಲಾಗಿದೆ.1460M.L.D ಮಿಲಿಯನ್ ಲೀಟರ್ ಫರ್ ಡೇ ನೀರು ಸರಬರಾಜು ಆಗ್ತಿದೆ ಯಾವುದೇ ನೀರಿನ ವ್ಯಥ್ಯಯ ಇಲ್ಲ  ಎಂದು ಜಲಮಂಡಳಿ ಹೇಳಿದೆ.
 
ಮುಂಜಾಗ್ರತಾ ಕ್ರಮವಾಗಿ ಕ್ಲೋರಿನೇಷನ್ .2ppm ಗ್ರಾಹಕರಿಗೆ ಕೊಡುವ ಪ್ಲಾನ್ ಇದೆ.ಜನರಿಗೆ ಬೇಸಿಗೆಯಿಂದ ನೀರಿನಲ್ಲಿ ಯಾವುದೇ ತೊಂದರೆ ಯಾಗದೆ ಮುಂಜಾಗ್ರತೆ ವಹಿಸುವಂತೆ ಜಲ ಮಂಡಳಿ ಹೇಳಿದ್ದು,ಒಟ್ಟು 64 ವಾಟರ್ ಟ್ಯಾಂಕರ್ ಗಳು ಶುದ್ದತೆ  ಕಾಪಾಡಿಕೊಂಡಿರುವ ಜಲ ಮಂಡಳಿ ತಿಳಿಸಿದೆ.ಪ್ರತಿ ನಿತ್ಯ 100 ಮನೆಗಳ ಗ್ರಾಹಕರಲ್ಲಿ ವಾಟರ್ ಟೆಸ್ಟ್  ಜಲ ಮಂಡಳಿ ಅಧಿಕಾರಿ ಮಾಡುತ್ತಿದ್ದಾರೆ.ಬೇಸಿಗೆ ಶುರುವಾಗುತ್ತಿದ್ದಂತೆ ಕೊಂಚ ಮಟ್ಟಿಗೆ ನೀರಿನ ಅಭಾವ ನೀಗಿಸಲು  ಜಲಮಂಡಳಿ ಸಿದ್ದತೆ ಮಾಡಿಕೊಂಡಿದೆ.
 
ಬೇಸಿಗೆ ಕಾಲದಲ್ಲಿ ನೀರಿನ ಅಭಾವದ ಪ್ರಶ್ನೆ ಉದ್ಬವಾಗಾದಿರಲು ಜಲಮಂಡಳಿ ಎಚ್ಚೇತ್ತುಕೊಂಡಿದ್ದು,ಅದರಲ್ಲೂ ವಿಶೇಷವಾಗಿ ನೀರಿನ ಅಭಾವ ಹೆಚ್ಚದಂತೆ ಕಂಪ್ಲೀಟ್ ಬಂದರೆ ಉಚಿತವಾಗಿ ಟ್ಯಾಂಕರ್ ಗಳ ಮೂಲಕ ನೀರು ಒದಗಿಸಲು ಜಲಮಂಡಳಿ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಜಲ ಮಂಡಳಿಯ ಚೀಫ್ ಇಂಜಿನಿಯರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ