ಬೇಸಿಗೆ ಆರಂಭದಲ್ಲೇ ಹಣ್ಣು, ತರಕಾರಿ ಬೆಲೆ ಏರಿಕೆ!

ಗುರುವಾರ, 23 ಫೆಬ್ರವರಿ 2023 (11:31 IST)
ಬೆಂಗಳೂರು : ಸಿಲಿಕಾನ್ ಸಿಟಿ ಜನರಿಗೆ ಬೇಸಿಗೆ ಧಗೆ ಒಂದ್ಕಡೆಯಾದ್ರೆ, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿ ಗ್ರಾಹಕರ ಜೇಬು ಸುಡಲಾರಂಭಿಸಿದೆ.

ಕಳೆದೊಂದು ವಾರದಿಂದ ಬೆಂಡೆಕಾಯಿ, ಟೊಮೆಟೋ, ಕ್ಯಾರೆಟ್ ಸೇರಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ಪೂರೈಕೆಯಲ್ಲಿ ಕೊರತೆಯಿರುವುದು ಹಾಗೂ ಕೆಲವು ಹಣ್ಣುಗಳ ಋತುಮಾನ ಮುಗಿಯುತ್ತಿರುವುದೇ ದಿಢೀರ್ ಬೆಲೆ ಏರಿಕೆಗೆ ಕಾರಣ ಎಂದು ಹಾಪ್ ಕಾಮ್ಸ್ ಅಧ್ಯಕ್ಷ ದೇವರಾಜ್ ಹೇಳಿದರು.

ಒಂದು ಕೆಜಿ ಟೊಮೆಟೋ ಬೆಲೆ 30 ರಿಂದ 40 ರೂಪಾಯಿ, ಒಂದು ಕೆಜಿ ಬಿನ್ಸ್ ಬೆಲೆ 40ರಿಂದ 70 ರೂಪಾಯಿ, ಒಂದು ಕೆಜಿ ಕ್ಯಾರೆಟ್ ಬೆಲೆ 20ರಿಂದ 50 ರೂಪಾಯಿ ಹಾಪ್ ಕಾಮ್ಸ್ನಲ್ಲಿ ಆಗಿದೆ. ಹಾಗೆಯೇ ಹಣ್ಣುಗಳಾದ ಒಂದು ಕೆಜಿ ಸೇಬು ಹಣ್ಣಿನ ಬೆಲೆ 170 ರಿಂದ 200 ರೂ, ಒಂದು ಕೆಜಿ ಬ್ಲ್ಯಾಕ್ ದ್ರಾಕ್ಷಿ 150 ರಿಂದ 220 ರೂ., ಒಂದು ಕೆಜಿ ದಾಳಿಂಬೆ 120 ರಿಂದ 190 ರೂ.ವರೆಗೆ ಏರಿಕೆಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ