ಕೈ ಪಾರ್ಟಿಯಲ್ಲಿ ಹಳಬರಲ್ಲ ಅಂತ ಮಾಜಿ ಸಚಿವ ಹೇಳಿದ್ಯಾಕೆ?
ಕಾಂಗ್ರೆಸ್ ಪಕ್ಷದಲ್ಲಿ ಯಾರು ವಲಸಿಗರಲ್ಲ, ಯಾರು ಹಳಬರಲ್ಲ ಎಂದು ಮಾಜಿ ಸಚಿವರೊಬ್ಬರು ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಹೈಕಮಾಂಡ್ ನ ಜೊತೆಗೆ ವಿಶ್ವಾಸದಲ್ಲಿ ಇರುವುದರಿಂದ
ಅವರ ಮೇಲೆ ಹೆಚ್ಚಿ ನ ಜವಾಬ್ದಾರಿಯಿದೆ ಎಂದು ತುಮಕೂರಿನಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಜವಾಬ್ದಾರಿಯಿದೆ. ಜಿ. ಪರಮೇಶ್ವರ್ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದಾರೆ. 8 ವರ್ಷಗಳ ಕಾಲ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿದೆ.