ನಂದಿನಿ ಮೊಸರು ತಿಂತೀರಾ...? ಈ ಸುದ್ದಿ ಓದಿದ್ರೆ ಬರಬಹುದು ವಾಂತಿ

ಶುಕ್ರವಾರ, 18 ಅಕ್ಟೋಬರ್ 2019 (14:22 IST)
ಮೊಸರು- ಮಜ್ಜಿಗೆ ಇಲ್ಲದೆ ಊಟ ಪೂರ್ಣ ಆಗೋದೆ ಇಲ್ಲಾ. ಅದರಲ್ಲೂ ನಮ್ಮ ಕರ್ನಾಟಕದ ಜನರಿಗೆ ನಂದಿನಿ ಹಾಲು,  ಮೊಸರು, ಮಜ್ಜಿಗೆ ಇರ್ಲೆಬೇಕು. ಆದರೆ ಶುದ್ಧವಾಗಿರಬೇಕಾದ ಪದಾರ್ಥ ಬೇರೆ ಥರಾನೇ ಇದ್ರೆ…?

ಕೆಎಂಎಫ್ ನಿಂದ ತಯಾರಾಗುವ ನಂದಿನಿ ಹಾಲು ಉತ್ಪನ್ನಗಳೆಂದರೆ ಜನರಿಗೆ ಅಚ್ಚು ಮೆಚ್ಚು. ನಂದಿನಿ ಹಾಲು, ಮೊಸರು, ತುಪ್ಪಾ ಇತರೆ ನಂದಿನಿಯ ಹಾಲು ಉತ್ಪನ್ನಗಳನ್ನ ನಿತ್ಯ ಬಳಸದ ಜನರೇ ಇಲ್ಲಾ. ಅಂತಹ ನಂದಿನಿ ಮೊಸರು ಬಳಸುವ ಮುನ್ನಾ ಕೊಂಚ ಹುಷಾರಾಗಿರೋದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು.

ಈ ಫೋಟೋ ಕ್ಲಿಕ್ಕಿಸಿದ್ದು ಮಹೇಶ್ ಎಂಬುವರು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ವಾಸಿ ಮಹೇಶ್.  ಸಂಜೆ ನಂದಿನಿ ರಿಟೈಲ್ ಶಾಪ್ ನಿಂದ 250 ಮಿ. ಲೀ. ಮೊಸರು ಪಾಕೆಟ್ ನ್ನ ಕೊಂಡು ತಂದಿದ್ದಾರೆ. ಅದನ್ನ ರೆಫ್ರಿಜಿರೇಟರ್ ನಲ್ಲಿಟ್ಟು ಬೆಳಗ್ಗೆ ತೆಗೆದಿದ್ದಾರೆ. ಓಪನ್ ಮಾಡಿ ಒಂದು ಪ್ಲೇಟ್ ಗೆ ಹಾಕಿದ್ದಾರೆ.

ಆಗ ಮೊಸರಿನ ಜೊತೆ ಸತ್ತು ಹೋಗಿದ್ದ ಕೀಟ ಜಿರಳೆ ಕೂಡ ಪ್ಲೇಟ್ ಗೆ ಬಿದ್ದಿದೆ. ಇದನ್ನ ಕಂಡ ಕೂಡಲೇ ಇಷ್ಟು ದಿನ ತಿಂದ ಮೊಸರು ಹಾಲು ಎಲ್ಲಾ ಹೊಟ್ಟೆಯಿಂದ ವಾಪಸ್ ಬರೊದೊಂದೇ ಬಾಕಿಯಾಗಿತ್ತಂತೆ. ಇದನ್ನ ನೋಡಿದ ಕುಟುಂಬಸ್ಥರು ಇನ್ನು ಮುಂದೆ ನಂದಿನಿ ಹಾಲು ಮೋಸರು ಬಳಸಲು ಭಯವಾಗುತ್ತಿದೆ ಎಂದು ಕೆ ಎಂ ಎಫ್ ನ ಅಶುದ್ಧತೆ, ಅಸುರಕ್ಷತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ