ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಮೈತ್ರಿ ನಾಯಕರ ನಡುವೆ ಕಿತ್ತಾಟ

ಶನಿವಾರ, 6 ಜುಲೈ 2019 (10:32 IST)
ಬೆಂಗಳೂರು : ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಮೈತ್ರಿ ನಾಯಕರಾದ  ಹಗರಿಬೊಮ್ಮನಹಳ್ಳಿ ಕೈ ಶಾಸಕ ಭೀಮಾ ನಾಯ್ಕ್  ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಧ್ಯೆ ಕಿತ್ತಾಟ ಶುರುವಾಗಿದೆ ಎಂಬುದಾಗಿ ತಿಳಿದುಬಂದಿದೆ.




ಕೆಎಂಎಫ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಗೆ ಬಿಟ್ಟುಕೊಡಲು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನಿರಾಕರಿಸಿದ್ದು, ಆದರೆ ಕಾಂಗ್ರೆಸ್ ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕೈ ಹಗರಿಬೊಮ್ಮನಹಳ್ಳಿ ಕೈ ಶಾಸಕ ಭೀಮಾ ನಾಯ್ಕ್ ಪಟ್ಟು ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನ ಬಿಡಲ್ಲ. ಒಂದು ವೇಳೆ ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಡದಿದ್ದರೆ ಬಂಡಾಯ ಏಳುವುದಾಗಿ  ಶಾಸಕ ಭೀಮಾ ನಾಯ್ಕ್  ಎಚ್ಚರಿಕೆ ನೀಡಿದ್ದಾರೆ  ಎನ್ನಲಾಗಿದೆ.


‘ಈ ಹಿಂದೆಯೂ ಕೆಎಂಎಫ್ ವಿಚಾರದಲ್ಲಿ ಕಾಂಗ್ರೆಸ್ ಗೆ ಅನ್ಯಾಯವಾಗಿದೆ, ಹೀಗಾಗಿ ಈ ಬಾರಿ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ ನೀಡಬೇಕು, ಮೈತ್ರಿ ಧರ್ಮವನ್ನು ಪಾಲಿಸದಿದ್ದರೆ ಶಕ್ತಿಪ್ರದರ್ಶನಕ್ಕೂ ನಾವು ಸಿದ್ಧ. ಹೆಚ್.ಡಿ.ರೇವಣ್ಣರನ್ನು ಸೂಪರ್ ಸಿಎಂ ಎಂದು ಕರೆಯುತ್ತಾರೆ. ಅವರಿಗೇಕೆ ಬೇಕು ಕೆಎಂಎಫ್ ಅಧ್ಯಕ್ಷ ಸ್ಥಾನ ಎಂದು  ಶಾಸಕ ಭೀಮಾ ನಾಯ್ಕ್ , ಹೆಚ್.ಡಿ.ರೇವಣ್ಣರನ್ನು  ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ