ನಿಮ್ಮ ಮಕ್ಕಳು ಆಟೋದಲ್ಲಿ ಸ್ಕೂಲ್ ಗೆ ಹೋಗ್ತಾರಾ?

ಮಂಗಳವಾರ, 16 ಜುಲೈ 2019 (12:43 IST)
ಪೋಷಕರೇ ನಿಮ್ಮ ಮಕ್ಕಳು ಪ್ರತಿದಿನ ಆಟೋದಲ್ಲಿ ಶಾಲೆಗೆ ಹೋಗುತ್ತಿದ್ದರೆ ನೀವು ಏನು ಮಾಡಬೇಕು?.

ಆಟೋ ಚಾಲಕರು ತಮ್ಮ ಆಟೋಗಳಲ್ಲಿ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಆಟೋರೀಕ್ಷಾಗಳಲ್ಲಿ ತೆಗೆದುಕೊಂಡು ಹೋಗಬಾರದು.

ಕಲಬುರಗಿ ನಗರದ ಆಟೋ ಚಾಲಕರು ತಮ್ಮ ಆಟೋಗಳಲ್ಲಿ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಆಟೋರೀಕ್ಷಾಗಳಲ್ಲಿ ತೆಗೆದುಕೊಂಡು ಹೋಗಬಾರದು. ಒಂದು ವೇಳೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಆಟೋಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ಕಂಡು ಬಂದಲ್ಲಿ ಅಂತಹ ಆಟೋಗಳ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಂತ ಕಲಬುರಗಿ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಉಪ ಸಾರಿಗೆ ಆಯುಕ್ತ ಕೆ. ದಾಮೋದರ ವಾರ್ನಿಂಗ್ ಮಾಡಿದ್ದಾರೆ.

 ಕಲಬುರಗಿ ನಗರದ ಆಟೋ ರಿಕ್ಷಾ ಚಾಲಕರು ಒಂದು ಆಟೋ ರೀಕ್ಷಾದಲ್ಲಿ 20 ರಿಂದ 25 ಚಿಕ್ಕ ಮಕ್ಕಳನ್ನು ಸಾಗಿಸುತ್ತಿರುವ ಪ್ರಯುಕ್ತ ಮಕ್ಕಳು ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಮಕ್ಕಳ ಮೇಲೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದು ದೂರಲಾಗಿತ್ತು.

ಕಲಬುರಗಿಯಲ್ಲಿ ನಡೆದ ನವದೆಹಲಿಯ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರು ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಕಳಿಸುವ ಆಟೋದಲ್ಲಿ ಎಷ್ಟು ಮಕ್ಕಳಿರುತ್ತಾರೆ ಎನ್ನುವುದನ್ನು ನೋಡಬೇಕು. ಹೆಚ್ಚು ಮಕ್ಕಳು ಆಟೋದಲ್ಲಿದ್ದರೆ ಗಮನಕ್ಕೆ ತರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ