ಕೈ ಶಾಸಕರಿಗೆ ಡಿಕೆಶಿ ವಾರ್ನಿಂಗ್?
ರಾಜ್ಯಸಭೆ ಚುನಾವಣೆ ಹಿನ್ನೆಲೆ ಸಿಎಲ್ಪಿ ಸಭೆ ನಡೆಸಿದ ಅವರು, ತಮ್ಮ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಡ್ಡ ಮತದಾನ ಆಗಬಾರದು. ಒಂದೇ ಒಂದು ಮತ ಅಡ್ಡಮತದಾನವಾದರೂ ಹುಷಾರ್..
ನಾನು ಬದುಕಿರುವವರೆಗೂ ನಿಮಗೆ `ಬಿ ಫಾರಂ ಸಿಗದಂತೆ ನೋಡಿಕೊಳ್ಳುತ್ತೇನೆ. ಯಾರು ಅಡ್ಡ ಮತದಾನ ಮಾಡುತ್ತಾರೋ ಅವರ ರಾಜಕೀಯ ಭವಿಷ್ಯ ಮುಂದೆ ಕಷ್ಟವಾಗಲಿದೆ ಎಂದಿದ್ದಾರೆ.
ಪಕ್ಷದ ಅಧಿಕೃತ ಏಜೆಂಟ್ ಆಗಿ ಡಿಕೆಶಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಕಾಂಗ್ರೆಸ್ನ ಪ್ರತಿ ಶಾಸಕರು ಸಹ ಡಿ.ಕೆ.ಶಿವಕುಮಾರ್ಗೆ ಮತ ಪತ್ರ ತೋರಿಸಿಯೇ ಮತದಾನ ಮಾಡಬೇಕಾಗಿದೆ.