ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಫೈಟ್

ಗುರುವಾರ, 27 ಏಪ್ರಿಲ್ 2023 (09:19 IST)
ಬೆಂಗಳೂರು : ಈ ಬಾರಿ ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಫೈಟ್ ಏರ್ಪಟ್ಟಿದ್ದು, ಬಿಎಸ್ಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ.
 
ಇದಕ್ಕೂ ಮೊದಲು 18 ವರ್ಷ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆನೆಕಲ್ ಬಿಜೆಪಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಹಾಲಿ ಶಾಸಕ ಶಿವಣ್ಣ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ 10 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಅಭ್ಯರ್ಥಿಗಳ ಹೆಸರು

ಕಾಂಗ್ರೆಸ್ – ಬಿ.ಶಿವಣ್ಣ(ಹಾಲಿ ಶಾಸಕ)
ಬಿಜೆಪಿ – ಹುಲ್ಲಹಳ್ಳಿ ಶ್ರೀನಿವಾಸ್
ಜೆಡಿಎಸ್ – ಕೆ.ಪಿ.ರಾಜು
ಬಿಎಸ್ಪಿ – ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ
ಎಎಪಿ – ಮುನೇಶ್
ಯಾರ ವೋಟು ಎಷ್ಟು?

ಒಟ್ಟು ಮತದಾರರು: 3,48,102
ಗಂಡು: 1,84,795
ಹೆಣ್ಣು: 1,63,228
ಇತರೆ: 79
ಜಾತಿ ಲೆಕ್ಕಾಚಾರ:
ಪರಿಶಿಷ್ಟ ಜಾತಿ ಮತ್ತು ಪಂಗಡ- 1,50,000
ಒಕ್ಕಲಿಗ- 40,000
ರೆಡ್ಡಿ- 44,500
ಅಲ್ಪಸಂಖ್ಯಾತರು- 65,500
ಕುರುಬ- 15,000
ಬಲಜಿಗ- 12,000
ಸವಿತಾ ಸಮಾಜ- 9,000
ಲಿಂಗಾಯುತ- 12,000

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ