ಪೌಷ್ಠಿಕ ಆಹಾರಗಳ ಪೂರೈಕೆಯ ಟೆಂಡರ್ ಪ್ರಕ್ರಿಯಯಲ್ಲಿ ಅವ್ಯವಹಾರ
ಶನಿವಾರ, 9 ಡಿಸೆಂಬರ್ 2017 (16:16 IST)
ಕೊಪ್ಪಳ: ಬಡ ಮಕ್ಕಳಿಗೆ ಪೌಷ್ಠಿಕಾಂಶಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅವರಿಗೆ ಅಂಗನವಾಡಿಯಲ್ಲಿ ಮೊಟ್ಟೆ, ಹಾಲು, ಮುಂತಾದ ಪೌಷ್ಠಿಕ ಆಹಾರಗಳು ಸಿಗುವಂತೆ ನಮ್ಮ ಸರ್ಕಾರ ಯೋಜನೆಗಳನ್ನು ಹಮ್ಮಿಕೊಂಡಿತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಮಕ್ಕಳಿಗೆ ಸರಿಯಾದ ಆಹಾರಗಳು ಅಂಗನವಾಡಿಯಲ್ಲಿ ಸಿಗುತ್ತಿಲ್ಲ.ಇಂತಹದ್ದೆ ಒಂದು ಘಟನೆ ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಿಗೆ ಮೊಟ್ಟೆ, ಪೌಷ್ಠಿಕ ಆಹಾರಗಳ ಪೂರೈಕೆಯ ಟೆಂಡರ್ ಪ್ರಕ್ರಿಯಯಲ್ಲಿ ಅವ್ಯವಹಾರವಾಗುತ್ತಿದೆ ಎಂದು ಕೊಪ್ಪಳದ ಡಿ.ಸಿ ಸೇರಿ ಮೂವರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಕೊಪ್ಪಳದ ಡಿ.ಸಿ ಎಂ.ಕನಗವಲ್ಲಿ,ಜಿ.ಪಂ. ಸಿಇಓ ವೆಂಕಟರಾಜು ಹಾಗು ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ಉಪನರ್ದೇಶಕರ ವಿರುದ್ಧ ಪ್ರಕಾಶ ಚೆನ್ನದಾಸ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ