ಪರ್ಸ್ ನಲ್ಲಿಟ್ಟ ಈ ವಸ್ತುಗಳಿಂದ ಉಂಟಾಗುವುದು ಧನ ನಷ್ಟ

ಗುರುವಾರ, 7 ಡಿಸೆಂಬರ್ 2017 (06:51 IST)
ಬೆಂಗಳೂರು: ಪರ್ಸ್ ನಲ್ಲಿ ನಾವು ಯಾವಾಗಲು ಹಣವನ್ನು ಇಟ್ಟುಕೊಂಡಿರುತ್ತೆವೆ. ಎಲ್ಲರು ಪರ್ಸ್ ನಲ್ಲಿ ಯಾವಾಗಲು ಹಣವಿರಲಿ ಎಂದು ಬಯಸುತ್ತಾರೆ. ಆದರೆ ಕೆಲವರು ಎಷ್ಟೆ ಪ್ರಯತ್ನಿಸಿದರು ಅವರ  ಪರ್ಸ್ ನಲ್ಲಿ ಹಣ ಉಳಿಯುವುದಿಲ್ಲ. ಇದಕ್ಕೆ ನಿಮ್ಮ ಪರ್ಸ್ ನಲ್ಲಿರುವ ಕೆಲ ವಸ್ತುಗಳು ಕಾರಣವಾಗಿರಬಹುದು.


ವಾಸ್ತುಶಾಸ್ತ್ರದ ಪ್ರಕಾರ ಪರ್ಸ್ ಎಂದರೆ ಲಕ್ಷ್ಮೀ ನಿವಾಸ. ಆದ್ದರಿಂದ ಅದರಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುವುದನ್ನು ತಿಳಿದುಕೊಳ್ಳುವುದು ಅವಶ್ಯಕ. ಹರಿದ ಪರ್ಸ್ ಅನ್ನು ಉಪಯೋಗಿಸಬಾರದು. ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುವುದರಿಂದ ಹರಿದ ತಕ್ಷಣ ಪರ್ಸ್ ನ್ನು ಬದಲಿಸಿ. ಹಾಗೇ ಪರ್ಸ್ ನಲ್ಲಿ ಹಳೆಕಾಗದ, ರಸೀದಿಗಳನ್ನು ಇಟ್ಟುಕೊಳ್ಳಬಾರದು. ಇದರಿಂದ ರಾಹುವಿನ ಪ್ರಭಾವ ಹೆಚ್ಚಾಗುತ್ತದೆ.



ಕೆಲವರಿಗೆ ಪರ್ಸ್ ನಲ್ಲಿ ಚಾಕಲೇಟು, ಇತರ ತಿನ್ನುವ ವಸ್ತುಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇದರಿಂದ ಸದಾ ಧನದ ಅಭಾವ ಉಂಟಾಗುತ್ತದೆ. ಹಾಗೆ ಪರ್ಸ್ ನಲ್ಲಿ ಚಾಕು, ಬ್ಲೇಡು, ಮಾತ್ರೆಗಳನ್ನು ಇಟ್ಟಕೊಳ್ಳುತ್ತಾರೆ. ಇವುಗಳು ನಕರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಇದರ ಬದಲು ಪರ್ಸ್ ನಲ್ಲಿ ತಾಮ್ರ, ಬೆಳ್ಳಿಯ ನಾಣ್ಯಗಳನ್ನು ಇಟ್ಟುಕೊಳ್ಳುವುದರಿಂದ ಧನ ಲಾಭವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ