ಡೇಜರ್ ಡೇಜರ್ ಹೆಬ್ಬಾಳ ಫ್ಲೈ ಓವರ್

ಶನಿವಾರ, 9 ಏಪ್ರಿಲ್ 2022 (20:08 IST)
ಸಿಲಿಕಾನ್ ಸಿಟಿ ರಸ್ತೆಯಲ್ಲಿ ಎಷ್ಟು ಕೇರ್ ಫುಲಾಗಿದ್ರು ಕಡಿಮೆನೇ.ಇತ್ತೀಚಿಗೆ ನಗರದ ರಸ್ತೆಗಳಲ್ಲಿ ಸರಣಿ  ಅಪಘಾತಗಳು ಸಂಭವಿಸುತ್ತಿದೆ. ಚಾಲಕರ ನಿರ್ಲಕ್ಷ್ಯವೋ ? ಇಲ್ಲಾ ರಸ್ತೆ ಸರಿ ಇಲ್ಲದಿರುವುದೋ ಏನ್ ಕಾರಣನ್ನೋ ಎಷ್ಟು ಸವಾರರು ತಮ್ಮ ಪ್ರಾಣವನ್ನ ಕಳೆದುಕೊಳ್ತಿದ್ದಾರೆ. ಅಂದಹಾಗೆ ನಗರದ ಹೆಚ್ಚು ಜನಸಂದಣಿ ಇರುವ ಹೆಬ್ಬಾಳ ಫ್ಲೈ ಓವರ್ ಡೇಜರ್ ಜೋನಾಗಿ ವಾಹನಸವಾರರನ್ನ ಕಾಡ್ತಿದೆ.ಹೌದು, ಬೆಂಗಳೂರು ವಿಮಾನ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ  ವಿಮಾನ ನಿಲ್ದಾಣದಲ್ಲಿ ಸರಣಿ ಅಪಘಾತದ ಪ್ರಕರಣ ಹೆಚ್ಚಾಗ್ತಿದೆ. ಕಳೆದ ಎರಡು ತಿಂಗಳಲ್ಲಿ ಅಂದಾಜು 91 ಅಪಘಾತ ಪ್ರಕರಣ ವರದಿಯಾಗಿದೆ. ಈ ಒಂದು ಹೆಬ್ಬಾಳ ಫ್ಲೈ ಓವರ್ ರಸ್ತೆ ಗೆ ಕೆ ಆರ್ .ಪುರಂ, ಗೊರಗುಂಟೆಪಾಳ್ಯ, ಮೆಜಸ್ಟಿಕ್ , ವಿಮಾನ ನಿಲ್ದಾಣ ಹೀಗೆ ನಾನಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಕೊಂಡಿ ಹೆಬ್ಬಾಳ . ಆದ್ರೆ ಈಗ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಇನ್ನು ಅತೀ ವೇಗ ಹಾಗೂ ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸುತ್ತಿದೆ. ಅಷ್ಟೇ ಅಲ್ಲದೇ ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಒಂದು ಕಡೆಯಾದ್ರೆ , ಮತ್ತೊಂದು ಕಡೆ ಅತೀ ವೇಗವಾಗಿ ಸಂಚಾರಿಸುವ ವಾಹನಗಳಿಂದ ಅಪಘಾತ ಸಂಭವಿಸುತ್ತಿದೆ.
ಇನ್ನು ನಗರದಲ್ಲಿ ವರ್ಷವಾರು ಸಂಭವಿಸಿದ ಅಪಘಾತಗಳ ವಿವರ 
 
ಠಾಣೆ              ಅಪಘಾತ             ಸಾವು            ಗಾಯಾಳು
ಹೆಬ್ಬಾಳ            14                      6                    10
ಯಲಹಂಕ         32                     11                    32
ಚಿಕ್ಕಜಾಲ          24                      3                     23
ದೇವನಹಳ್ಳಿ        21                      1                     27
ಬಾಣಸವಾಡಿ      24                       6                    24
ಕೆ ಆರ್ ಪುರಂ     21                       4                    21
ಕಾಮಾಕ್ಷಿಪಾಳ್ಯ    22                      2                    20
 
ಬೆಂಗಳೂರಿನಲ್ಲಿ 2020 ರ ಜನವರಿಯಿಂದ ಫೆಬ್ರವರಿವರೆಗೂ ಒಟ್ಟು 539 ಅಪಘಾತಗಳು 105 ಸಾವು ಮತ್ತು 481 ಜನರಿಗೆ ಗಾಯವಾಗಿದೆ. ಹೀಗೆ ಚಾಲಕರ ಅತೀವೇಗದಿಂದ ಅಪಘಾತ ಸಂಭವಿಸುತ್ತಿದೆ. ಇತ್ತ ಕೆಲ ಜನರು ರಸ್ತೆಯಲ್ಲಿ ವಾಹನ ಚಾಲಿಸಬೇಕಾದ್ರೆ ಜೀವನ ಕೈ ಯಲ್ಲಿಡಿದು ವಾಹನ ಚಾಲಿಸುತ್ತಾರೆ. ಆದ್ರು ಹಾಗಾಗ ಅಪಘಾತ ಪ್ರಕರಣ ಇಲ್ಲಿ ವರದಿಯಾಗ್ತಿರುತ್ತೆ . ಜನವರಿ 21 ಹೆಬ್ಬಾಳ ಮೇಲ್ಸೆತುವೆಯಲ್ಲಿ ಬೈಕ್ ನಿಂದ ಆಯತಪ್ಪಿ ಬಿದ್ದಿದ್ದ ಮಹಶ್ರೀ ಮೇಲೆ ಕ್ಯಾಂಟರ್ ವಾಹನ ಹರಿದು ಸ್ಥಳದಲ್ಲೇ ಸಾವನಾಪ್ಪಿದ ಘಟನೆ ನಡೆದಿತ್ತು. ಹೀಗೆ ಅಪಘಾತಗಳು ಸಂಭವಿಸುತ್ತಿದೆ.  ರಸ್ತೆಯನ್ನ ದೊಡ್ಡದಾಗಿಯಂತೂ ಮಾಡುವುದಕ್ಕೆ ಆಗುವುದಿಲ್ಲ. ಆದ್ರೆ ಜನರಿಗಾಗಿ ಸ್ಕೈ ವಾಕ್ ನಿರ್ಮಾಣ ಮಾಡಬೇಕು ಅಂತಾ  ಜನರು ಆಗ್ರಹಿಸುತ್ತಿದ್ದಾರೆ.ಇತ್ತಾ ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡರನ್ನ ಕೇಳಿದ್ರೆ ಹೆಚ್ಚು ಅಪಘಾತವಾಗ್ತಿದೆ. ಇದೆಲ್ಲಾ ಚಾಲಕರ ನಿರ್ಲಕ್ಷ್ಯ ಮತ್ತು ಅತೀ ವೇಗದಿಂದ ಅಪಘಾತ ಸಂಭಸುತ್ತಿದೆ. ರಸ್ತೆಯನ್ನ ಆಗಲ್ಲ ಮಾಡಲು ಆಗುವುದಿಲ್ಲ. ಆದ್ರೆ ಈ ರಸ್ತೆಯಲ್ಲಿ ಜನರು ನೋಡಿಕೊಂಡು ವಾಹನದಲ್ಲಿ ಚಾಲಿಸಬೇಕು . ಅಪಘಾತ ತಡೆಯುವುದಕ್ಕಾಗಿ ನಾವು ಅನೇಕ ಕ್ರಮ ಕೈಗೊಳ್ಳುತ್ತಿದ್ದೇವೆ. ಇನ್ಮುಂದೆ ಈ ರಸ್ತೆಯಲ್ಲಿ ಮೂರು ಜನ ಟ್ರಾಫಿಕ್ ಪೊಲೀಸ್ ರನ್ನ ನೇಮಕ ಮಾಡ್ತೇವೆ. ಆದಷ್ಟು ಅಪಘಾತ ಆಗುವುದನ್ನ ತಡೆಯುತ್ತೇವೆ ಆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ರು.ಈ ರಸ್ತೆಯಲ್ಲಿ ಏನಿಲ್ಲ ಅಂದ್ರು ನಿತ್ಯ 5 ರಿಂದ 10,000 ವಾಹನಗಳು ಸಂಚಾರಿಸುತ್ತೇವೆ. ಸಾವಿರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳದಿದ್ದಾರೆ ಇನ್ನಷ್ಟು ಅನಾಹುತಗಳು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೇಳಿದಂತೆ ಕ್ರಮ ಕೈಗೊಳ್ತಾರಾ? ಹೇಗೆ ? ಎಂಬುದನ್ನ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ