ಸಚಿವ ಡಿಕೆ ಶಿವಕುಮಾರ್ ಬಂಧನವಾಗುತ್ತಾ?!
ಹೀಗಾಗಿ ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿರುವ ಡಿಕೆ ಶಿವಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಸಹೋದರ, ಸಂಸದ ಡಿಕೆ ಸುರೇಶ್ ಜತೆ ನ್ಯಾಯಾಲಯಕ್ಕೆ ಹಾಜರಾಗಿರುವ ಡಿಕೆಶಿ ಪಡ ವಕೀಲ ಶೇಷಾಚಲ ವಾದ ಮಂಡಿಸಿದ್ದಾರೆ. ಆದರೆ ಜಾಮೀನು ಅರ್ಜಿಗೆ ಆದಾಯ ತೆರಿಗೆ ಇಲಾಖೆ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದೀಗ ನ್ಯಾಯಮೂರ್ತಿ ಎಂಎಸ್ ಆಳ್ವ ನೀಡುವ ತೀರ್ಪಿನ ಮೇಲೆ ಗಮನ ಕೇಂದ್ರೀಕೃತವಾಗಿದೆ.