‘ಹಿಂದೂ ಧರ್ಮವನ್ನು ಮುಗಿಸುವುದೇ ಕಾಂಗ್ರೆಸ್ ನ ಅಜೆಂಡಾ’
ಈ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್, ‘ಮೇಲ್ನೋಟಕ್ಕೆ ಕಾಂಗ್ರೆಸ್ ಭಾಷೆಯಲ್ಲಿ ಪಾಂಡವರು ಎಂದರೆ ಅಲ್ಪಸಂಖ್ಯಾತರು, ಕೌರವರು ಎಂದರೆ ಹಿಂದುಗಳು ಅನಿಸುತ್ತೆ.ಹಿಂದೂ ಧರ್ಮದ ಅಂತ್ಯ ಕಾಂಗ್ರೆಸ್ ನ ಅಜೆಂಡಾ ಇರಬಹುದೇ? ಇಷ್ಟೆಲ್ಲಾ ಏತಕ್ಕಾಗಿ? ಒಂದು ಕುಟುಂಬವನ್ನು ಮೆಚ್ಚಿಸುವುದಕ್ಕಾಗಿಯೇ?’ ಎಂದು ಟಾಂಗ್ ಕೊಟ್ಟಿದ್ದಾರೆ.
ಬಹುಶಃ ಇತ್ತೀಚೆಗೆ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಈ ರೀತಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.