ಮಗಳು ಕೊರಳಿಗೆ ತಾಳಿ ಬೀಳುತ್ತಿದ್ದಂತೇ ಭಾವುಕರಾದ ಡಿಕೆಶಿ

ಭಾನುವಾರ, 14 ಫೆಬ್ರವರಿ 2021 (09:31 IST)
ಬೆಂಗಳೂರು: ಮಗಳು ಐಶ್ವರ್ಯಾ ಕೊರಳಿಗೆ ಅಳಿಯ ಅಮರ್ಥ್ಯ ಹೆಗಡೆ ತಾಳಿ ಕಟ್ಟುತ್ತಿದ್ದಂತೇ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಭಾವುಕರಾಗಿದ್ದಾರೆ.


ತಾಳಿ ಶಾಸ್ತ್ರ ವೇಳೆ ತೀರಾ ಭಾವುಕರಾದ ಡಿಕೆಶಿ ಕಣ್ಣೀರು ಹಾಕುತ್ತಲೇ ಇಬ್ಬರಿಗೂ ಅಕ್ಷತೆ ಹಾಕಿ ಹರಸಿದ್ದಾರೆ. ಇನ್ನು, ತಂದೆ ಕಣ್ಣಂಚಲ್ಲಿ ನೀರು ನೋಡಿ ಪುತ್ರಿ ಐಶ್ವರ್ಯಾ ಕೂಡಾ ಭಾವುಕರಾಗಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಐಶ್ವರ್ಯಾ, ಅಮರ್ಥ್ಯ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ