ಡಿಕೆ ಶಿವಕುಮಾರ್ ಹೇಳಿದವರೇ ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರೆ ಎಂದ ಯತ್ನಾಳ್: ಡಿಕೆಶಿ ಪ್ರತಿಕ್ರಿಯೆ ಏನಿತ್ತು
ಹಾಲಿ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಯತ್ನಾಳ್, ಈ ಮೊದಲಿನಿಂದಲೂ ವಿಜಯೇಂದ್ರ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಲೇ ಇದ್ದಾರೆ. ಡಿಕೆಶಿ ಹೇಳಿದವರೇ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಟಾಂಗ್ ನೀಡಿದ್ದರು.
ನಮಗೆ ನಮ್ಮ ಪಾರ್ಟಿಯಲ್ಲೇ ಬೇಕಾದಷ್ಟು ಕೆಲಸ ಇದೆ. ಬಿಜೆಪಿಯವರಿಗೆ ಈಗ ಮಾಡಕ್ಕೆ ಕೆಲಸ ಇಲ್ಲ. ಅವರಿಗೆ ಜನರು ವಿರೋಧ ಪಕ್ಷದವರಾಗಿ ಕೆಲಸ ಕೊಟ್ಟಿದ್ದಾರೆ. ಅದನ್ನು ಮಾಡೋದು ಬಿಟ್ಟು ಏನೇನೋ ಆರೋಪ ಮಾಡ್ತಿರ್ತಾರೆ. ಅವರದ್ದು ಯಾವತ್ತೂ ಇದ್ದಿದ್ದೇ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.