ಬಿಡ್ರೀ ಅಂಥಾ ನೂರು ರೆಡ್ಡಿಗಳನ್ನು ನೋಡಿದ್ದೀನಿ: ಡಿಕೆ ಶಿವಕುಮಾರ್

Krishnaveni K

ಗುರುವಾರ, 23 ಜನವರಿ 2025 (15:48 IST)
ಬೆಂಗಳೂರು: ಸತೀಶ್ ಜಾರಕಿಹೊಳಿಯನ್ನು ಮಣಿಸಲು ಶ್ರೀರಾಮುಲುವನ್ನು ಡಿಕೆ ಶಿವಕುಮಾರ್ ಅಸ್ತ್ರ ಮಾಡಿದ್ದಾರೆ ಎಂಬ ಜನಾರ್ಧನ ರೆಡ್ಡಿ ಹೇಳಿಕೆಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

ಒಂದು ಕಾಲದಲ್ಲಿ ಪರಮ ಸ್ನೇಹಿತರಾಗಿದ್ದ ಬಳ್ಳಾರಿ ಗಣಿ ದಣಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಈಗ ಬಿರುಕು ಮೂಡಿದೆ. ನಿನ್ನೆ ಬಿಜೆಪಿ ಸಭೆಯಲ್ಲಿ ಜನಾರ್ಧನ ರೆಡ್ಡಿ ವಿರುದ್ಧ ಶ್ರೀರಾಮುಲು ಆಕ್ರೋಶ ಹೊರಹಾಕಿದ್ದರು. ಅದರ ಬೆನ್ನಲ್ಲೇ ಇಂದು ಜನಾರ್ಧನ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಶ್ರೀರಾಮುಲುವನ್ನು ಎತ್ತಿ ಕಟ್ಟಿದ್ದು ಡಿಕೆ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸತೀಶ್ ಜಾರಕಿಹೊಳಿಯನ್ನು ಕಟ್ಟಿ ಹಾಕಲು ಶ್ರೀರಾಮುಲುವನ್ನು ಪರ್ಯಾಯ ನಾಯಕರಾಗಿ ಬೆಳೆಸಲು ಡಿಕೆಶಿ ಮುಂದಾಗಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದರು. ಇದರ ಬಗ್ಗೆ ಇಂದು ಮಾಧ್ಯಮಗಳು ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿವೆ.

ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಡಿಕೆಶಿ ನಿರಾಕರಿಸಿದರು. ‘ಅಯ್ಯೋ..  ಬಿಡ್ರೀ.. ಇಂತಹ ನೂರಾರು ರೆಡ್ಡಿಗಳನ್ನು ನೋಡಿದ್ದೀನಿ. ಅವನೇನು ನನ್ನ ಬಗ್ಗೆ ಕಾಮೆಂಟ್ ಮಾಡೋದು. ಎಲ್ಲಾ ಇನ್ನೊಮ್ಮೆ ಹೇಳ್ತೀನಿ’ ಎಂದು ಕಾರು ಏರಿ ಹೊರಟೇ ಬಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ