ಇಂದಿನಿಂದ ಮೂರು ದಿನ ಯಾರ ಕೈಗೂ ಸಿಗಲ್ಲ ಡಿಕೆ ಶಿವಕುಮಾರ್

Krishnaveni K

ಮಂಗಳವಾರ, 22 ಜುಲೈ 2025 (10:47 IST)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಇಂದಿನಿಂದ ಮೂರು ದಿನಗಳ ಕಾಲ ಯಾರ ಕೈಗೂ ಸಿಗಲ್ಲ ಎಂದಿದ್ದಾರೆ. ಮೂರು ದಿನ ವಿಶ್ರಾಂತಿ ಪಡೆಯಲಿದ್ದೇನೆ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಗೆ ಇತ್ತೀಚೆಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು. ಇದಾದ ಬಳಿಕ ಅವರು ಕೇವಲ ಒಂದು ದಿನ ವಿಶ್ರಾಂತಿ ಪಡೆದಿದ್ದರು. ಅದಾದ ಬಳಿಕ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಅವರಿಗೆ ವಿಶ್ರಾಂತಿಯೇ ಪಡೆಯಲು ಸಾಧ್ಯವಾಗಿರಲಿಲ್ಲ. ಸಿಎಂ ಸಿದ್ದರಾಮಯ್ಯ ಸಾಧನಾ ಸಮಾವೇಶಕ್ಕೂ ಅನಾರೋಗ್ಯದ ನಡುವೆಯೂ ಆಗಮಿಸಿದ್ದರು. ಅದಾದ ಬಳಿಕ ದೆಹಲಿಗೆ ತೆರಳಿದ್ದರು.

ಆದರೆ ಈಗ ಡಿಕೆ ಶಿವಕುಮಾರ್ ತೀರಾ ಸುಸ್ತಾದವರಂತೆ ಕಾಣುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇನ್ನು ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದಾರೆ. ಹೀಗಾಗಿ ಇಂದಿನಿಂದ ಮೂರು ದಿನ ಅವರು ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ.

ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜನರನ್ನು ಅನಿವಾರ್ಯ ಕಾರಣಗಳಿಂದ ಭೇಟಿ ಮಾಡಲಾಗುತ್ತಿಲ್ಲ. ಯಾರನ್ನೂ ಭೇಟಿ ಮಾಡಲು ಆಗಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ