ಸಿಎಂ ಕಚೇರಿ ಮೇಲೆ ಡಿಕೆಶಿವಕುಮಾರ್ ಆರೋಪ
ಚಿತ್ತಾಪುರದಲ್ಲಿ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ್ ಪಾಟೀಲ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ನೇತೃತ್ವದಲ್ಲಿ ಸೇರ್ಪಡೆ ಆದರು. ನಂತರ ಮಾತನಾಡಿದ ಡಿಕೆಶಿವಕುಮಾರ್ ಸಿಎಂ ಕಚೇರಿ ಮೇಲೆ ನೇರವಾಗಿ ಆರೋಪ ಮಾಡಿದ್ದಾರೆ. ಬಿಜೆಪಿ ಸಿಎಂ ಕಚೇರಿ ಮತ್ತು ಲಿಗಲ್ ಟೀಮ್ ಷಡ್ಯಂತ್ರ ಮಾಡಿದೆ.ಕಾಂಗ್ರೆಸ್ ಅಭ್ಯರ್ಥಿಗಳ ತಿರಸ್ಕಾರ ಮಾಡಲು ಪ್ರಯತ್ನ ನಡೀತಾ ಇದೆ.ಕಾಂಗ್ರೆಸ್ ಅಭ್ಯರ್ಥಿಗಳ ನಾಮಿನೇಷನ್ ಡೌನ್‌ಲೋಡ್ ಮಾಡಲಾಗಿದೆ.ಇದರ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು.ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಮಸ್ಯೆ ಇದೆ.ಸಾಕಷ್ಟು ಬಿಜೆಪಿ ಅಭ್ಯರ್ಥಿಗಳ ನಾಮಿನೇಷನ್ ಸಮಸ್ಯೆ ಇದೆ.ನನ್ನ ನಾಮಿನೇಷನ್ ರಿಜೆಕ್ಟ್ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿದರು.