ಆನಂದ್ ಸಿಂಗ್ ಸಹೋದರಿ ಬಿ. ಎಲ್. ರಾಣಿ ಸಂಯುಕ್ತ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆದರು.ಹೊಸಪೇಟೆ ಟಿಕೆಟ್ ಆಕಾಂಕ್ಷೀ ಆಗಿದ್ದ ಸಂಯುಕ್ತಾಗೆ ಬಿಜೆಪಿ ನಿರಾಸೆ ಗೊಳಿಸಿದೆ.ಈ ಹಿನ್ನೆಲೆ ಜೈರಾಂ ರಮೇಶ್,ಹರಿಪ್ರಸಾದ್ ಸಮ್ಮುಖದಲ್ಲಿ ಕೈ ಪಾಳ್ಯ ಸೇರ್ಪಡೆ ಆದರು. ಸೇರ್ಪಡೆ ಆಗಿ ಮಾತನಾಡಿದ ರಾಣಿ ಸಂಯುಕ್ತ ಕಾಂಗ್ರೆಸ್ ಸಿದ್ಧಾಂತವನ್ನ ನಾವು ಒಪ್ಪಿದ್ದೇವೆ.ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ.ಜಗದೀಶ್ ಶೆಟ್ಟರ್ ಸೇರಿ ಹಲವರು ಸೇರಿದ್ದಾರೆ.ಇನ್ನಷ್ಟು ಮಂದಿ ಕಾಂಗ್ರೆಸ್ ಗೆ ಬರ್ತಾರೆ. ಬಿಜೆಪಿಯಲ್ಲಿ ಸರಿಯಾದ ವಾತಾವರಣ ಇಲ್ಲ.ಹಾಗಾಗಿಯೇ ಎಲ್ಲರೂ ಪಕ್ಷವನ್ನ ತೊರೆಯುತ್ತಿದ್ದಾರೆ.ನಾವು ಕಾಂಗ್ರೆಸ್ ಪಕ್ಷ ಸೇರಿದ್ದೇವೆ.