ಗಣೇಶನಿಗೆ ದೇಣಿಗೆ ಕೇಳಲು ಬಂದ ಮಕ್ಕಳನ್ನು ಅಟ್ಟಿದ ಡಿಕೆ ಶಿವಕುಮಾರ್: ಡಾ ಸಿಎನ್ ಮಂಜುನಾಥ್ ನಡೆದುಕೊಂಡ ರೀತಿ ನೋಡಿ

Sampriya

ಮಂಗಳವಾರ, 3 ಸೆಪ್ಟಂಬರ್ 2024 (16:34 IST)
Photo Courtesy X
ಬೆಂಗಳೂರು: ಇನ್ನೇನು ಗೌರಿ ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಯುವಕರ ಬಳಗ ಹಬ್ಬದ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಇನ್ನೂ ತಮ್ಮ ಏರಿಯಾದಲ್ಲಿ ಅದ್ಧೂರಿಯಾಗಿ ಗಣೇಶನನ್ನು ಕೂರಿಸಬೇಕೆಂದು ಹಣ ಸಂಗ್ರಹಣೆಗೆ ಈಗಾಗಲೇ ಇಳಿದಿದ್ದಾರೆ.

ಇದೀಗ ಅಶ್ಚರ್ಯ ಎಂಬಂತೆ ಗಣೇಶ ಕೂರಿಸಲು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಸಿಎನ್‌ ಮಂಜುನಾಥ್ ಬಳಿಯೇ ಚಿಣ್ಣರ ಗ್ಯಾಂಗ್‌ವೊಂದು ಹೋದ ಪ್ರತ್ಯೇಕ ಘಟನೆ ಈಚೆಗೆ ನಡೆದಿದೆ. ಚಂದಾ ವಸೂಲಿಗೆ ಬಂದ ಮಕ್ಕಳೊಂದಿಗೆ ಡಿಕೆ ಶಿವಕುಮಾರ್ ಅವರು ಆಕ್ರೋಶದಿಂದ ವರ್ತಿಸಿ, ಇಲ್ಲಿಂದಿ ನಡೀರಿ ಎಂದಿದ್ದಾರೆ. ಇನ್ನೂ ಸಿಎನ್‌ ಮಂಜುನಾಥ್ ಅವರು ಹಣ ಕೊಟ್ಟು, ಚೆನ್ನಾಗಿ ಓದಿ ಮುಂದೆ  ಬನ್ನು ಎಂದು ಮಕ್ಕಳಿಗೆ ಬುದ್ಧಿ ಮಾತು ಹೇಳಿದ್ದಾರೆ.

ಮಕ್ಕಳೊಂದಿಗೆ ಡಿಕೆಶಿ ಹಾಗೂ ಸಿಎನ್ ಮಂಜುನಾಥ್ ಅವರ ವರ್ತನೆಯ ವಿಡಿಯೋ ಹಂಚಿದ ನೆಟ್ಟಿಗರು ದುರಂಹಕಾರದ ಪರಮಾವದಿಗೂ ಹಾಗೂ ಹೃದಯವಂತನ ಹೃದಯವಂತಿಕೆಗೆ ಇರುವ ವ್ಯತ್ಯಾಸ ನೋಡಿ ಎಂದು ಡಿಕೆಶಿ ವರ್ತನೆ ಬಗ್ಗೆ  ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸಿಎನ್ ಮಂಜುನಾಥ್ ಅವರ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ.

ಈಚೆಗೆ ಕನಕಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಕ್ಕಳ ಗುಂಪೊಂದು ಡಿಕೆಶಿ ಬಳಿ ಗಣೇಶ ಕೂರಿಸಲು ಹಣ ಕೇಳಿದ್ದಾರೆ. ಮಕ್ಕಳೆಲ್ಲ ಡಿಸಿಎಂ ಸಾಹೇಬರು ದುಡ್ಡು ಕೊಡ್ತಾರೆ ಎಂಬ ಖುಷಿಯಲ್ಲಿ ಸರತಿಯಲ್ಲಿ ನಿಂತು ಹೋದಾರೆ, 'ಆಯ್ತು ಎಂಪಿ ಬರ್ತಾರೆ, ಅವರೇ ದುಡ್‌ ಕೊಡ್ತಾರೆ ನಡೀರಿ ನಡೀರಿ' ಎಂದು ಕಳುಹಿಸಿಬಿಟ್ಟಿದ್ದಾರೆ. ಇದರಿಂದ ಮಕ್ಕಳೆಲ್ಲ ಬೇಸರದಿಂದ ಅಲ್ಲಿಂದ್ದ ಹೊರಟು ಹೋಗಿದ್ದಾರೆ.

ಇನ್ನೊಂದು ವಿಡಿಯೋದಲ್ಲಿ ಸಂಸದ ಡಾ.ಸಿ.ಎನ್‌ ಮಂಜುನಾಥ್ ಅವರು ಪ್ರಯಾಣಿಸುತ್ತಿರುವಾಗ ವಾಹನಕ್ಕೆ ಅಡ್ಡ ನಿಂತ ಮಕ್ಕಳ ಗುಂಪೊಂದು ಗಣೇಶ ಕೂರಿಸಲು ಹಣ ಕೇಳಿದ್ದಾರೆ. ಹಣ ಕೊಟ್ಟ ಮಂಜುನಾಥ್ ಅವರು 'ಚೆನ್ನಾಗಿ ಓದಬೇಕು' ಎಂದು ಕಿವಿಮಾತು ಹೇಳಿ ಅಲ್ಲಿಂದ್ದ ಹೊರಟು ಹೋದರು.

ಇದೆರಡು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ದುರಂಹಕಾರಿಗೆ ಮತ್ತು ಹೃದಯವಂತನ ನಡುವಿನ ವ್ಯತ್ಯಾಸ ನೋಡಿ ಎಂದಿದ್ದಾರೆ.





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ