ಡಿಸಿಎಂ ಆದ ಬಳಿಕ ಡಿ.ಕೆ.ಶಿವಕುಮಾರ್ ಮೊದಲ ಸಿಟಿ ರೌಂಡ್ಸ್

ಗುರುವಾರ, 8 ಜೂನ್ 2023 (17:17 IST)
ಬಿಡಿಎ ಕಚೇರಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಟಿ ರೌಂಡ್ಸ್ ಮಾಡಿದ್ದು,ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಮಳೆ ಅವಾಂತರ, ಡ್ರೈನೇಜ್ ಸಮಸ್ಯೆ, ಕಾಲುವೆ ಹೂಳೆತ್ತುವ ಬಗ್ಗೆ ನಗರದ ಹಲವು ಸಮಸ್ಯೆಗಳನ್ನು ಖುದ್ದು ಗಮನಿಸಿದ್ದಾರೆ.ಎಲ್ಲೆಲ್ಲಿ ಡ್ರೈನೇಜ್ ಸಮಸ್ಯೆಯಿದೆ,ರಾಜಕಾಲುವೆ ಹೂಳೆತ್ತಿದ್ದಾರಾ?ನೆರೆಗೆ ಕಾರಣವಾಗ್ತಿರುವ ಅಂಶಗಳೇನು ಎಂಬುದರ ಪರಿಶೀಲನೆ ನಡೆಸಿದ್ದಾರೆ.ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ, ಬಿಡಿಎಂ ಆಯುಕ್ತರು, ಜಲಮಂಡಳಿಯ ಅಧಿಕಾರಿಗಳು ಸಾಥ್ ನೀಡಿದ್ದಾರೆ.

ಬೆಳ್ಳಂದೂರು ಲೇಕ್‌ನಲ್ಲಿ ಬಿಡಿಎ ಕಾಮಗಾರಿ ವೀಕ್ಷಿಸಿದ ಬಳಿಕ ಬೆಳ್ಳಂದೂರು ಕೋಡಿ ಬ್ರಿಡ್ಜ್ ವೀಕ್ಷಣೆ ಮಾಡಿದ್ರು ನಂತರ ಸರ್ಜಾಪುರದ ಮಳೆನೀರು ಕಾಲುವೆ, ಮೈನಾ ಅಪಾರ್ಟ್‌ಮೆಂಟ್ ಬಳಿ ಕಾಮಗಾರಿ,ವರ್ತೂರು ಲೇಕ್ ಕಾಮಗಾರಿಗಳನ್ನು ವೀಕ್ಷಿಸಿದ್ದಾರೆ.
 
ಇನ್ನೂ ದಿವ್ಯಶ್ರೀ ರಾಜಕಾಲುವೆ ಒತ್ತುವರಿ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.12 ಮೀಟರ್ ರಾಜಕಾಲುವೆ ಇದೆ ಇಲ್ಲಿ 7 ಮೀಟರ್ಗೆ ಕಡಿಮೆ ಮಾಡಲಾಗಿದೆ.ಹೀಗೆ ಇದ್ರೆ ಮತ್ತೆ ಫ್ಲಡ್ ಆಗುತ್ತೆ.ತಕ್ಷಣ Accordingly ಸಧ್ಯಕ್ಕೆ ಕಚ್ಚಾ ರಾಜಕಾಲುವೆ ನಿರ್ಮಿಸಿ ಎಂದು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ ಖಡಕ್ ಸೂಚನೆ ನೀಡಿದ್ದಾರೆ.ಮಾರುತ್ತಹಳ್ಳಿಯಿಂದ ಬೆಳ್ಳಂದೂರ ವರ್ತೂರು ಕೆರೆಗೆ ನೀರು ಹೋಗುವ ರಾಜ್ ಕಾಲುವೆ ಡಿಕೆ ಶಿವಕುಮಾರ್ ಪರೀಶಿಲನೆ ಮಾಡಿದ್ದಾರೆ.ಈ ಹಿಂದೆ ಮಳೆ ಹಾನಿಗೊಳಗಾಗಿದ್ದ ಯಮಲೂರಿನ್ನ ಕೆರೆಗೆ ಡಿಕೆಶಿ ಭೇಟಿ ನೀಡುವ ಹಿನ್ನೆಲೆ ರಾಜಕಾಲುವೆ ಹುಳನ್ನ  ಪಾಲಿಕೆ ಎತ್ತಿದೆ.ಯಮಲೂರಿನಲ್ಲಿ ದಿವ್ಯಶ್ರೀ  ಬಳಿ ನಿರ್ಮಾಣವಾಗ್ತಿರೋ ಹೊಸ ರಾಜಕಾಲುವೆ ತಡೆ ಗೋಡೆ ಪರಿಶೀಲಿಸಿದ್ದು,ಡಿಕೆಶಿಗೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ