ರೀಲ್ಸ್ ಮಾಡಿದ್ದಕ್ಕೆ ಪತ್ನಿಗೆ ನಿಜವಾಗಿಯೂ ತಲಾಖ್ ನೀಡಿದ!

ಶುಕ್ರವಾರ, 9 ಜೂನ್ 2023 (08:58 IST)
ಮುಂಬೈ : ತಲಾಖ್ ಕುರಿತು ರೀಲ್ಸ್ ಮಾಡಿದ್ದಕ್ಕೆ ತನ್ನ ಪತ್ನಿಗೆ ವ್ಯಕ್ತಿಯೊಬ್ಬ ನಿಜವಾಗಿಯೂ ತಲಾಖ್ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಮುಂಬೈನ ಸಹರ್ ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
 
ಕುರ್ಲಾ ನಿವಾಸಿ ರುಖ್ಸಾರ್ ಮುತಕೀಮ್ ಸಿದ್ದಿಕಿ (23) ದೂರು ದಾಖಲಿಸಿದ ಮಹಿಳೆ. ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿದ್ದಕ್ಕೆ ನನ್ನ ಪತಿ ತಲಾಖ್ ನೀಡಿದ್ದಾನೆ. ಅಲ್ಲದೇ ಸೋಷಿಯಲ್ ಮೀಡಿಯಾದಿಂದ ಆ ವೀಡಿಯೋ ಡಿಲೀಟ್ ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಪತಿ ಹಾಗೂ ಅತ್ತೆ ವಿರುದ್ಧ ವರದಕ್ಷಿಣಿ ಕಿರುಕುಳ ಆರೋಪ ಕೂಡ ಮಾಡಿದ್ದಾರೆ. 

ರುಖ್ಸಾರ್ ಮುತಕೀಮ್ ಸಿದ್ದಿಕಿ ಕಳೆದ ವರ್ಷ ಅಂಧೇರಿ (ಪೂರ್ವ) ನಿವಾಸಿ ಮುತಕೀಮ್ ಸಿದ್ದಿಕಿ ಅವರನ್ನು ವಿವಾಹವಾದರು. ರುಖ್ಸಾರ್ ಅವರ ದೂರಿನ ಪ್ರಕಾರ, ಮುತಕೀಮ್ ಪೋಷಕರು ಮತ್ತು ಸಹೋದರಿಯರು ವರದಕ್ಷಿಣೆಯಾಗಿ 5 ಲಕ್ಷ ರೂ. ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದರು. ನಮ್ಮ ಮನೆಗೆ ಆಗಾಗ್ಗೆ ಬರುವ ಇನ್ನೊಬ್ಬ ಮಹಿಳೆಯೊಂದಿಗೆ ಮುತಕೀಮ್ ಸಂಬಂಧ ಹೊಂದಿದ್ದಾನೆ ಎಂದು ರುಖ್ಸಾರ್ ಆರೋಪಿಸಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ರುಖ್ಸಾರ್ ತನ್ನ ಪೋಷಕರ ಮನೆಗೆ ಹೋಗಿ ಅಲ್ಲಿಯೇ ಉಳಿದಿದ್ದರು. ತನ್ನ ಪತಿ ಜೊತೆಗಿರುವ ರೀಲ್ಸ್ ಮಾಡಿ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ರೀಲ್ಸ್ ನೋಡಿ ಕೋಪಗೊಂಡಿದ್ದ ಪತಿ, ಅದನ್ನು ತಕ್ಷಣ ಡಿಲೀಟ್ ಮಾಡುವಂತೆ ಹೇಳಿದ್ದ. ರುಖ್ಸಾರ್ ಡಿಲೀಟ್ ಮಾಡದಿದ್ದಕ್ಕೆ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ನಂತರ ಆಕೆ ಚುನಭಟ್ಟಿ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ