ಚನ್ನಪ್ಪಟ್ಟಣದಲ್ಲಿ ಸ್ಪರ್ಧಿಸಲು ಡಿಕೆ ಸುರೇಶ್ ಹಿಂದೇಟು ಹಾಕಿದ್ದೇಕೆ: ಸತ್ಯ ಹೇಳಿದ ಡಿಕೆಸು

Krishnaveni K

ಸೋಮವಾರ, 24 ಜೂನ್ 2024 (16:58 IST)
ಬೆಂಗಳೂರು: ಎಚ್ ಡಿ ಕುಮಾರಸ್ವಾಮಿಯಿಂದ ತೆರವಾಗಿರುವ ಚನ್ನಪಟ್ಟಣ ಉಪಚುನಾವಣೆಗೆ ಡಿಕೆ ಸುರೇಶ್ ಸ್ಪರ್ಧೆ ಮಾಡದೇ ಇರಲು ತೀರ್ಮಾನಿಸಿರುವುದು ಯಾಕೆ ಎಂದು ಅವರೇ ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿಕೆ ಸುರೇಶ್ ಸೋಲು ಅನುಭವಿಸಿದ್ದರು. ಇದಾದ ಬಳಿಕ ಅವರು ಚನ್ನಪಟ್ಟಣ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳಿತ್ತು. ಆದರೆ ಅದು ಸುಳ್ಳಾಗಿದೆ.

ಡಿಕೆ ಸುರೇಶ್ ಬದಲಿಗೆ ತಾವೇ ಸ್ಪರ್ಧಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಹಾಗಿದ್ದರೂ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಅಧಿಕೃತ ಘೋಷಣೆಯಾಗಿಲ್ಲ. ಈ ನಡುವೆ ತಾವಂತೂ ಸ್ಪರ್ಧೆ ನಡೆಸುವುದಿಲ್ಲ ಎಂದು ಘೋಷಿಸಿರುವ ಡಿಕೆಸು ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

‘ಇತ್ತೀಚೆಗಷ್ಟೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಲೋಕಸಭೆಯಲ್ಲಿ ಸೋತು ಒಂದು ತಿಂಗಳಾಗಿಲ್ಲ.  ಜನ ನನ್ನನ್ನು ತಿರಸ್ಕರಿಸಿದ್ದಾರೆ. ಆಗಲೇ ಇನ್ನೊಂದು ಚುನಾವಣೆಗೆ ನಿಂತರೆ ಜನ ನೋಡಿ ನಗ್ತಾರೆ. ಬೇರೆಯವರು ಕೆಲಸ ಮಾಡಲಿ. ಅವರಿಗೆ ನಮ್ಮ ಬೆಂಬಲವಿರಲಿದೆ’ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ