ಜೆಡಿಎಸ್ ನವರ ರಾಜಕೀಯ ನಡೆ ನಮಗೆ ಗೊತ್ತು ಎಂದು ಜೆಡಿಎಸ್ ಗೆ ಟಾಂಗ್ ನೀಡಿದ ಡಿಕೆಶಿ

ಶನಿವಾರ, 9 ಸೆಪ್ಟಂಬರ್ 2023 (16:00 IST)
ಜೆಡಿಎಸ್,ಬಿಜೆಪಿ ಮೈತ್ರಿ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಕುಮಾರಸ್ವಾಮಿ,ದೇವೇಗೌಡರು ಏಕಾಂಗಿ ಅಂದಿದ್ದರು.ಏಕಾಂಗಿ ಎಲೆಕ್ಷನ್ ಗೆ ಹೋಗ್ತೇವೆ ಅಂದಿದ್ರು.ಈಗ ಅವರ ನಿಲುವು ಬದಲಾಗಿದೆ.ಅವರ ರಾಜಕೀಯ ನಿಲುವಿನ ಬಗ್ಗೆ ಹೇಳ್ತಿದ್ದಾರೆ.ಬೇರೆ ಬೇರೆ ನಾಯಕರು ಪ್ರತಿಕ್ರಿಯೆ ನೀಡ್ತಿದ್ದಾರೆ, ನೀಡಲಿ.ಅವರು ಜೊತೆಗಾದ್ರೂ‌ ಹೋಗಲಿ.ಪ್ರತ್ಯೇಕವಾಗಿಯಾದ್ರೂ ಹೋಗಲಿ ಅವರಿಗೆ ಬಿಟ್ಟಿದ್ದು.ಹಿಂದೆ ಪ್ರತ್ಯೇಕವಾಗಿ ಹೋಗ್ತೇವೆ ಅನ್ನುತ್ತಿದ್ರು.ಈಗ ಒಂದೊಂದು ದಿನ ಒಂದೊಂದು ಹೇಳಿಕೆ ನೀಡ್ತಿದ್ದಾರೆ.ಅವರ ರಾಜಕೀಯ ನಡೆ ನಮಗೆ ಗೊತ್ತು.ನಾವು ಹಿಂದೆನೂ‌ತಲೆ ಕೆಡಿಸಿ ಕೊಂಡಿರ್ಲಿಲ್ಲ.ಮುಂದೆನೂ ತಲೆ ಕೆಡಿಸಿಕೊಳ್ಳಲ್ಲ.೨೦೧೮ ರಲ್ಲಿ ರೊಟ್ಟಿ ಅಳಸಿತ್ತಾ? ಎಂದು ಜೆಡಿಎಸ್ ನಾಯಕರಿಗೆ ಡಿಕೆಶಿ ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ