ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸಿದ್ದು, ರಾಜಕೀಯ ಮೇಲಾಟಗಳು ಗರಿಗೆದರಿವೆ.. ಪಕ್ಷಾಂತರ ಪರ್ವ ಜೋರಾಗೇ ನಡೀತಿದ್ದು, ಪ್ರಭಾವಿಗಳಿಗೆ ಎಲ್ಲಾ ಪಕ್ಷಗಳು ಗಾಳ ಹಾಕ್ತಿವೆ.. ಪಕ್ಷದಲ್ಲಿ ಸೈಲೆಂಟ್ ಆಗಿ ಬಂಡಾಯವೆದ್ದ ನಾಯಕರನ್ನು ಸೆಳೆಯಲು ಎಲ್ಲಾ ಪಕ್ಷಗಳು ಬಕಪಕ್ಷಿಗಳಂತೆ ಕಾಯ್ತಿರ್ತವೆ.. ಇದೀಗ ಸಚಿವ V.ಸೋಮಣ್ಣ ಕೇಸರಿ ಪಡೆ ವಿರುದ್ಧ ಮುನಿಸಿಕೊಂಡಿದ್ದಾರೆ.. ಸೋಮಣ್ಣ ಕಮಲ ತೊರೆದು BJP ಸೇರ್ತಾರ ಎಂಬ ಪ್ರಶ್ನೆ ಮೂಡಿತ್ತು, ಜೊತೆಗೆ ಸೋಮಣ್ಣ ಮತ್ತು D.K. ಶಿವಕುಮಾರ್ ಮಾತುಕತೆಯ ಫೋಟೋ ವೈರಲ್ ಆಗಿತ್ತು. ಇದೀಗ ಈ ಕುರಿತು KPCC ಅಧ್ಯಕ್ಷD.K. ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ನಾವು ಒಟ್ಟಿಗೆ ಸೇರಿ ಬೇಕಾದಷ್ಟು ಧರ್ಮದ ಹೆಸರಿನಲ್ಲಿ, ಮಠಗಳ ವಿಚಾರದಲ್ಲಿ ಕೆಲಸ ಮಾಡಿದ್ದೀವಿ.. ಅವರು ನಮ್ಮ ತಾಲ್ಲೂಕಿನವ್ರು... ಬೇಕಾದಷ್ಟು ಸಲ ನಮ್ಮ ಊರಿಗೆ ಬರ್ತಾ ಇರ್ತಾರೆ.. ರಾಜಕಾರಣ ಬೇರೆ ಬಾಂಧವ್ಯ ಬೇರೆ ಎಂದು ಹೇಳಿದ್ರು.. ಸೋಮಣ್ಣರನ್ನ ಸುಮ್ಮನೆ ಯಾಕೆ ಎಳೆದು ತರ್ತೀರಾ?. ಅಧಿವೇಶನ ಮುಗಿಸಿಕೊಂಡು ಬೆಳಗಾವಿಯಿಂದ ಫ್ಲೈಟ್ನಲ್ಲಿ ನಾನು ಸೋಮಣ್ಣ ಒಟ್ಟಿಗೆ ಬಂದಿದ್ವಿ.. ಅವರು ನನ್ನ ಪಕ್ಕದಲ್ಲಿ ಕುಳಿತುಕೊಂಡ್ರೆ ಏನು ತೊಂದ್ರೆ ಎಂದು ಪ್ರಶ್ನಿಸಿದ್ರು.