ಶಾಸಕರು ಸಚಿವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ವಾಗ್ದಾಳಿ ನಡೆಸಿದ ಡಿಕೆಶಿ

ಶನಿವಾರ, 26 ನವೆಂಬರ್ 2022 (19:11 IST)
ಮತದಾನದ ಆಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ನಮ್ಮ ಮನವಿಯನ್ನ ಚುನಾವಣಾ ಆಯೋಗ ಅಂಗೀಕರಿಸಿದೆ.ಅದರ ಆಧಾರದ ಮೇಲೆ ಮೂವರು ಅಧಿಕಾರಿಗಳನ್ನ ಅಮಾನತು ಮಾಡಿದೆ.ಆದ್ರೆ ಈ ಅಧಿಕಾರಿಗಳು ಸಿಎಂ ಮತ್ತು ಶಾಸಕರು ಹಾಗೂ ಸಚಿವರ ಸೂಚನೆಯಂತೆ ಕೆಲಸ ಮಾಡಿದ್ದಾರೆ.ಇದರ ಕಿಂಗ್ ಪಿನ್ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.
 
ಓಟ್ ಕಳ್ಳತನ ನೋಟು ಪ್ರಿಂಟ್ ಮಾಡುವಷ್ಟೇ ದೊಡ್ಡ ಅಪರಾಧ.ಇಂತಹ ಕೆಲಸ ಮಾಡಿದವರ ವಿರುದ್ಧ ಕ್ರಮ ಆಗಬೇಕು.ಇದು ಜನರಿಗೆ ಮಾಡಿದ ಮೋಸ .ಜನ ಇದಕ್ಕೆ ಪಾಠ ಕಲಿಸಬೇಕು.ಬಿಎಲ್ಓ ನೇಮಕ ಮಾಡುವ ಅಧಿಕಾರ ಯಾರಿಗೂ ಇಲ್ಲ.ಪಕ್ಷದಿಂದ ನೇಮಕ ಮಾಡಿದ್ರು ತಹಶಿಲ್ದಾರ್ ಅದಕ್ಕೆ ಸಹಿ ಹಾಕಬೇಕು .ನಮ್ಮ ಅವಧಿಯಲ್ಲಿ ಅಕ್ರಮ ಆಗಿದ್ರೆ ಕ್ರಮ ಜರುಗಿಸಿ ಎಂದು ಹೇಳಿದರು.
 
ಇನ್ನೂ ಆರ್ ಆರ್ ನಗರದಲ್ಲಿ ಗೌಡ ಅಂತ ಹೆಸರು ಇದ್ರೆ ಕುಟುಂಬದಲ್ಲಿ ಎರಡು ವೋಟ್ ಮಾತ್ರ ಬಿಟ್ಟಿದ್ದಾರೆ.ಗೌಡ ಅಂತ ಇದ್ರೆ ಡಿಲಿಟ್ ಮಾಡಿದ್ದಾರೆ.ಮುನಿರತ್ನ ಹೆಸರು ಪ್ರಸ್ತಾಪ ಮಾಡದೇ ಗಂಭೀರ ಆರೋಪವನ್ನ  ಡಿಕೆಶಿ ಮಾಡಿದ್ದಾರೆ.ದಲಿತ, ಹಿಂದುಳಿದ, ಮುಸ್ಲಿಂ ಸಮುದಾಯದ ಮತಗಳನ್ನ ಡಿಲಿಟ್ ಮಾಡಿದ್ದಾರೆ.ನಮ್ಮ ಕಾಲದಲ್ಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ.ನಮ್ಮ ಕಾಲದಲ್ಲಿ ಆಗಿದ್ರೆ ಕೇಸ್ ಹಾಕಿ ಕ್ರಮ ಕೈಗೊಳ್ಳಿ..ನಾವು ನೇರವಾಗಿ ಇಳಿದು ಬಂದಿಲ್ಲವಲ್ಲ.ಈ ಪ್ರಕರಣದಲ್ಲಿ ಶಾಸಕರು, ಸಚಿವರು ಭಾಗಿಯಾಗಿದ್ದಾರೆ.ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದು ಹೇಳಿದ್ದಾರೆ .ಹಾಕಲಿ ನನಗೇನು ಭಯವಿಲ್ಲ ಎಂದು ಡಿಕೆಶಿ ಅಶ್ವಥ್ ನಾರಾಯಣ ಗೆ ತಿರುಗೇಟು ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ