ಮುಸ್ಲಿಂ ವ್ಯಕ್ತಿಯಿಂದ ಆಂಜನೇಯನ ಪೂಜೆ

ಶನಿವಾರ, 26 ನವೆಂಬರ್ 2022 (16:32 IST)
ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್​ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು, ಇದರ ನಡುವೆಯೇ ಮುಸ್ಲಿಂ ವ್ಯಕ್ತಿಯೊಬ್ಬ ಆಂಜನೇಯನಿಗೆ ಅಭಿಷೇಕ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇಗೊಣ್ಣಾರ ಗ್ರಾಮದಲ್ಲಿ ಕಂಡುಬಂದಿದೆ. ಹಿರೇಗೊಣ್ಣಾರಿನ ನಿವಾಸಿಯಾಗಿರುವ ಅಮೀನಸಾಬ್ ನಡುಲಮನಿ ತಮ್ಮ ಜಮೀನಿನಲ್ಲಿ ಆಂಜನೇಯ ವಿಗ್ರಹವಿಟ್ಟು ಪ್ರತಿದಿನ ಪೂಜೆ ಮಾಡುತ್ತಿದ್ದಾರೆ. ಆಂಜನೇಯ ಭಕ್ತನಾಗಿರೋ ಅಮಿನಸಾಬ್​ರ ಈ ಭಕ್ತಿಗೆ ಗ್ರಾಮದ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ