ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ: ಡಿ.ಕೆ. ಶಿವಕುಮಾರ್

ಬುಧವಾರ, 13 ಸೆಪ್ಟಂಬರ್ 2017 (14:14 IST)
ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕರೆ ಮಾಡಿ ನೋಟಿಸ್ ಕಳುಹಿಸುವುದಕ್ಕೆ ಅಡ್ರೆಸ್ ಬೇಕು ಎಂದು ಕೇಳಿದರು. ಆಯ್ತು ಕಳುಹಿಸಿ ಎಂದು ತಿಳಿಸಿರುವುದಾಗಿ ಹೇಳಿದ್ದೇನೆ ಎಂದು ಹೇಳಿದ್ದಾರೆ.

ನಿನ್ನೆ ನನಗೆ ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ. ಕ್ರಾಸ್ ಚೆಕ್ ಮಾಡಿದಾಗ ಇಡಿ ಕಚೇರಿ ಎಂದು ತಿಳಿದುಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕೆ ನನ್ನ ತಮ್ಮ ಸಂಸದ ಡಿ.ಕೆ. ಸುರೇಶ್`ಗೆ ಮಾಹಿತಿ ನೀಡಿದ್ದೇನೆ. ಪರಿಶೀಲನೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಈ ವಿಷಯವನ್ನ ಬಹಿರಂಗಪಡಿಸುವುದು ಬೇಡವೆಂದು ಸುಮ್ಮನಿದ್ದೆ. ನಿನ್ನೆ ಪತ್ರಕರ್ತರೊಬ್ಬರು ಕರೆ ಮಾಡಿ ಕೇಳಿದರು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ಬಳಿಕ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗುವ ಬಗ್ಗೆ ವರದಿಗಳು ಕೇಳಿ ಬಂದಿದ್ದವು. ಇದೀಗ, ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಅವರಿಗೆ ನೋಟಿಸ್ ನೀಡಲು ಕರೆ ಬಂದಿರುವುದು ಸಚಿವರಿಗೆ ಹೊಸ ಸಂಕಷ್ಟ ಉಂಟು ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ