ರಾಜಧಾನಿಯಲ್ಲಿ ಒತ್ತುವರಿಯಾದ ಒಟ್ಟು ಭೂಮಿಯ ಮೌಲ್ಯ ಏಷ್ಟು ಗೊತ್ತೆ? ಕೇಳಿದ್ರೆ ಶಾಕ್ ಆಗತ್ತೇ....

ಬುಧವಾರ, 26 ಅಕ್ಟೋಬರ್ 2016 (20:38 IST)
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆ ಕಟ್ಟೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿ. ರಾಜಕಾಲುವೆ ಸೇರಿದಂತೆ ಒಟ್ಟು 2 ಲಕ್ಷಕ್ಕೂ ಹೆಚ್ಚು ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಕೆರೆ ಒತ್ತುವರಿ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ್ ತಿಳಿಸಿದ್ದಾರೆ. 
 
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 10,787.28 ಕೆರೆ ಪ್ರದೇಶಗಳು ಒತ್ತುವರಿಯಾಗಿದ್ದು, ಇದರ ಅಂದಾಜು ಮೌಲ್ಯ 1.5 ಲಕ್ಷ ಕೋಟಿ ರೂಪಾಯಿ. ಒಟ್ಟು 1256.13 ಕಟ್ಟೆ ಕುಂಟೆ ಒತ್ತುವರೆಯಾಗಿದ್ದು, ಇದರ ಒಟ್ಟು ಮೌಲ್ಯ 16.5 ಸಾವಿರ ಕೋಟಿ ಎಂದು ಹೇಳಿದರು.
 
ಇನ್ನೂ ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆ 511 ಪ್ರದೇಶಗಳಲ್ಲಿ ಒತ್ತುವರೆಯಾಗಿದ್ದು, ಇದರ ಅಂದಾಜು ಮೌಲ್ಯ 11 ಸಾವಿರ ಕೋಟಿ. ಬಫರ್ ಜೋನ್ ವ್ಯಾಪ್ತಿಯಲ್ಲಿ ಬರುವ 1,14,988 ಪ್ರದೇಶಗಳಿದ್ದು, ಇದರ ಅಂದಾಜು ಮೌಲ್ಯ 11.5 ಸಾವಿರ ಕೋಟಿ. ರಾಜಕಾಲುವೆಯಲ್ಲಿ 1,34,786 ಪ್ರದೇಶದಲ್ಲಿ ಒತ್ತುವರೆಯಾಗಿದ್ದು, ಇದರ ಅಂದಾಜು ಮೌಲ್ಯ 13.47 ಸಾವಿರ ಕೋಟಿ ಎಂದು ಅಂದಾಜು ಮಾಡಲಾಗಿದೆ ಎಂದರು. 
 
ಈ ದೊಡ್ಡ ಪ್ರಮಾಣದ ಒತ್ತುವರಿ ಮಾಡಲು ಬಿಲ್ಡರ್‌ಗಳಿಗೆ ಅವಕಾಶ ನೀಡಿದ್ದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೊಡಬೇಕೆನ್ನುವುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಕೆರೆ ಒತ್ತುವರಿ ಸಮಿತಿಯ ಅಧ್ಯಕ್ಷ ಕೆ.ಬಿ.ಕೋಳಿವಾಡ್ ಹೇಳಿದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ