ಬಾಡಿಗೆ ಕೇಳಿದ್ದಕ್ಕೆ ಕಣ್ಣಿದ ಖಾರದ ಪುಡಿ ಎರಚಿ ಮಾಡಿದ್ದೇನು ಗೊತ್ತಾ?

ಮಂಗಳವಾರ, 26 ಫೆಬ್ರವರಿ 2019 (16:10 IST)
ಬಾಡಿಗೆ ಕೇಳಿದ್ದಕ್ಕೆ ಕಣ್ಣಿಗೆ ಖಾರದ ಪುಡಿ ಹಾಕಿ ಆ ಬಳಿಕ ಚಾಕುವಿನಿಂದ ಇರಿದ ಘಟನೆ ನಡೆದಿದೆ.
 ಬಾಡಿಗೆ ಹಣ ಕೇಳಿದ್ದಕ್ಕೆ ರಿಕ್ಷಾ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಕೊಪ್ಪ ತಾಲೂಕಿನ ಜಯಪುರ ಸಮೀಪ ಕಟ್ಟೆಮನೆ ಗ್ರಾಮದ ಮಕ್ಕಿಮನೆಯಲ್ಲಿ ಈ ಘಟನೆ ನಡೆದಿದೆ. ಮಕ್ಕಿಮನೆ ನಿವಾಸಿ ಚಂದ್ರು ಅವರ ಪುತ್ರ ದಿನೇಶ್ ಎಂಬಾತ ರಾತ್ರಿ ಕೊಪ್ಪದಿಂದ ಹರೀಶ್ ಎಂಬವರ ರಿಕ್ಷಾವನ್ನು ಕೊಪ್ಪದಿಂದ ಮಕ್ಕಿಮನೆಗೆ ಬಾಡಿಗೆಗೆ ಕರೆದುಕೊಂಡು ಹೋಗಿ ಮಕ್ಕಿಮನೆ ತಲುಪಿದ್ದಾನೆ. ಕೂಡಲೆ ರಿಕ್ಷಾದಿಂದ ಇಳಿದ ಆರೋಪಿ ದಿನೇಶ್ ಬಳಿ ಚಾಲಕ ಬಾಡಿಗೆ ಹಣವನ್ನು ಕೇಳಿದ್ದಕ್ಕೆ ರಿಕ್ಷಾ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದ ಆರೋಪಿ ದಿನೇಶ್ ಅಲ್ಲಿಂದ ಪರಾರಿಯಾಗಿದ್ದಾನೆ.

ಇರಿತಕ್ಕೊಳಗಾದ ಚಾಲಕ ಹರೀಶ್ ಹೇಗೋ ಅಲ್ಲಿಂದ ಬಚಾವ್ ಆಗಿ ಬಂದು ಜಯಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಜಯಪುರ ಪೊಲೀಸರು ಪರಾರಿಯಾಗಿದ್ದ ಆರೋಪಿ ದಿನೇಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇರಿತಕ್ಕೊಳಗಾದ ಹರೀಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪದ ಆಸ್ಪತ್ರೆಗೆ ಸೇರಿಸಲಾಗಿದ್ದು ಹರೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ