ಪ್ರಧಾನಿ ಮೋದಿಗೆ ಯಡಿಯೂರಪ್ಪ ಕೊಟ್ಟ ಗಿಫ್ಟ್ ಏನು ಗೊತ್ತಾ?

ಮಂಗಳವಾರ, 27 ಫೆಬ್ರವರಿ 2018 (18:11 IST)
ದಾವಣಗೆರೆಯಲ್ಲಿ ನಡೆದ ರೈತ ಸಮಾವೇಶಕ್ಕೆ ಬಂದ ಪ್ರಧಾನಿ ಮೋದಿಗೆ ಅದ್ಭುತ ಸ್ವಾಗತ ದೊರಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜನ್ಮ ದಿನದಂದು ನಡೆದ ಸಮಾವೇಶದಲ್ಲಿ ಬಿಜೆಪಿ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.
ಸಮಾವೇಶದಲ್ಲಿ ಮುಷ್ಠಿ ಅಕ್ಕಿ ಯೋಜನೆಗೆ ಚಾಲನೆ ನೀಡಲಾಯಿತು. ಈ ವೇಳೆ ಭಾಷಣ ಮಾಡಿದ ಪ್ರಧಾನಿ ಮೋದಿ ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ಧ ರಾಮಯ್ಯ ಎಂದರೆ ಸಿದ್ಧ ರೂಪಯಾ ಎಂದು ವ್ಯಂಗ್ಯ ಮಾಡಿದರು. ಆದರೆ ರೈತ ಸಮಾವೇಶದಲ್ಲಿ ಮಹದಾಯಿ ವಿವಾದದ ಬಗ್ಗೆ ಮೋದಿ ತುಟಿ ಬಿಚ್ಚಲಿಲ್ಲ.
 
ಸಚಿವ ಡಿಕೆಶಿ ಮೇಲೆ ನಡೆದ ಐಟಿ ದಾಳಿ ಬಗ್ಗೆಯೂ ಪರೋಕ್ಷವಾಗಿ ಮೋದಿ ಟಾಂಗ್ ಕೊಟ್ಟರು. ಈ ಸಂದರ್ಭದಲ್ಲಿ ಬಿಎಸ್ ವೈ, ಪ್ರಧಾನಿ ಮೋದಿಗೆ ನೇಗಿಲು ಉಡುಗೊರೆಯಾಗಿ ಕೊಟ್ಟರು.
 
ನೀವು ನಮಗೆ ಹೆಲ್ಪ್ ಮಾಡಿ ನಾವೂ ಮುಂದೆ ನಿಮಗೆ ಮಾಡ್ತೀವಿ: ಕಾಂಗ್ರೆಸ್‌ಗೆ ಎಚ್ ಡಿ ಕುಮಾರಸ್ವಾಮಿ ಆಫರ್!
ಮಾರ್ಚ್ 23 ರಂದು ನಡೆಯಲಿರುವ ರಾಜ್ಯ ಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರ ಕೊಟ್ಟರೆ ದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಸಹಕಾರ ಕೊಡುವುದಾಗಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಗೆ ಆಫರ್ ಕೊಟ್ಟಿದ್ದಾರೆ.
 
ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ 50 ಸದಸ್ಯರ ಬಲವಿಲ್ಲ. ಕೇವಲ 37 ಸದಸ್ಯರ ಬೆಂಬಲವಿದೆ. ಹೀಗಾಗಿ ಕಾಂಗ್ರೆಸ್ ತನ್ನ 2 ಅಭ್ಯರ್ಥಿಯನ್ನು ಗೆಲ್ಲಿಸಿ ಉಳಿದ ಹೆಚ್ಚುವರಿ ಮತಗಳನ್ನು ಜೆಡಿಎಸ್ ಗೆ ನೀಡಿ ಎಂದು ಕುಮಾರಸ್ವಾಮಿ ಆಹ್ವಾನ ಕೊಟ್ಟಿದ್ದಾರೆ.
 
ಒಂದು ವೇಳೆ ಈಗ ಜೆಡಿಎಸ್ ಗೆ ಸಹಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಸಹಕಾರ ಕಾಂಗ್ರೆಸ್ ಗೆ ಇರುತ್ತದೆ ಎಂದಿದ್ದಾರೆ. ಆ ಮೂಲಕ ಮುಂಬರುವ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಬಂದರೆ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ಕೊಟ್ಟು ಸಮ್ಮಿಶ್ರ ಸರ್ಕಾರ ರಚಿಸಬಹುದು ಎಂಬ ಸುಳಿವು ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ