ಹೊಸ ಲುಕ್‌ನಲ್ಲಿ ಲಗ್ಗೆ ಇಟ್ಟ ಹೊಂಡಾ ಶೈನ್...!

ಗುರುಮೂರ್ತಿ

ಮಂಗಳವಾರ, 27 ಫೆಬ್ರವರಿ 2018 (13:13 IST)
ಇತ್ತೀಚಿಗಷ್ಚೇ 2018ರ ಆಟೋ ಎಕ್ಸ್ ಪೋ ಮೇಳ ಮುಗಿದಿದ್ದು ಅದರಲ್ಲಿ ಪ್ರದರ್ಶನಗೊಂಡ ಹೋಂಡಾ ಸಿಬಿ ಶೈನ್‌ ಮಾದರಿಗೆ ಜನರಿಂದ ತುಂಬಾ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಈ ಬೈಕ್ ಮಾರುಕಟ್ಟೆಗೆ ಕಾಲಿರಿಸಿದ್ದು, ಈ ಬೈಕ್‌ನ ಎಕ್ಸ್‌ ಶೋ ರೂಮ್ ಬೆಲೆಯನ್ನು 62,032 ಎಂದು ಅಂದಾಜಿಸಲಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಹೊಂಡಾ ಆವೃತ್ತಿಯ ಮಾದರಿಗಳು ಜನರ ವಿಶ್ವಾಸ ಗಳಿಸಿದ್ದು ಅದರಲ್ಲೂ ಸಿಬಿ ಶೈನ್ ಆವೃತ್ತಿ ತನ್ನ ಮೈಲೇಜು ಮತ್ತು ದರದಿಂದ ಮಾರುಕಟ್ಟೆಯಲ್ಲಿದ್ದ ಬಜಾಜ್ ಹಾಗು ಇತರ 110 ಸಿಸಿ ಮತ್ತು 125 ಸಿಸಿ ಬೈಕ್‌ಗಳಿಗೆ ಬಾರಿ ಪೈಫೋಟಿಯನ್ನು ನೀಡಿತ್ತು. ಈಗ ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿರುವ ಈ ಬೈಕ್ ‌ಹಲವು ವಿಶೇಷತೆಗಳನ್ನು ಹೊಂದಿದೆ.
ಈಗಾಗಲೇ ಈ ಬೈಕ್ ಅನ್ನು 3 ಮಾದರಿಯಲ್ಲಿ ಕಂಪನಿ ಮಾರುಕಟ್ಟೆಗೆ ಪರಿಚಯಿಸಿದ್ದು, ಇತ್ತೀಚಿನ ಟ್ರೆಂಡ್‌ಗೆ ಅನುಗುಣವಾಗಿ ಈ ಬೈಕ್‌ಗಳಲ್ಲಿ ಮಾರ್ಪಾಡು ಮಾಡಲಾಗಿದೆ ಎಂದೇ ಹೇಳಬಹುದು. ಇದರಲ್ಲಿ ಮಾರ್ಪಾಡುಗಳಿಗೆ ಅನುಗುಣವಾಗಿ ಬೈಕ್‌ ದರವನ್ನು ನಿಗದಿಪಡಿಸಿದ್ದು, ಸಿಬಿ ಶೈನ್ ಎಸ್ ಪಿ (ಡ್ರಮ್) ಮಾದರಿಗೆ 62,032 ರೂ, ಸಿಬಿ ಶೈನ್ ಎಸ್ ಪಿ (ಡಿಸ್ಕ್) ಮಾದರಿಗೆ ರೂ 64518 ಮತ್ತು ಸಿಬಿ ಶೈನ್ ಎಸ್ ಪಿ  (ಸಿಬಿಎಸ್) ಮಾದರಿಗೆ 66,508 ರೂ ಎಂದು ಹೇಳಲಾಗಿದೆ.
ಈಗೀನ ಹೊಸ ಆವೃತ್ತಿಯಲ್ಲಿ ಹೊಂಡಾ ಬೈಕ್‌ಗಳನ್ನು ಉತ್ತಮವಾಗಿ ಮಾರ್ಪಡಿಸಿದ್ದು, ಈ ಬೈಕ್ 124.73 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 10.16bhp @ 7,500rpm ಹಾಗೂ 10.30Nm ನ ಟಾರ್ಕ್ @ 5,500rpm ಶಕ್ತಿಯನ್ನು ಈ ಬೈಕ್‌ ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ 5 ಗೇರ್ ಬಾಕ್ಸ್‌ಗಳಿದ್ದು, 10.5 ಲೀ, ಇಂಧನ ಸಂಗ್ರಹಣೆ ಸಾಮರ್ಥ್ಯವನ್ನು ಈ ಬೈಕ್ ಹೊಂದಿದೆ.
 
ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪೋರ್ಕ್ಸ್‌ಗಳನ್ನು ಹೊಂದಿದ್ದು, ಹಿಂಬದಿಯಲ್ಲಿ ಟ್ವೀನ್ ಶೊಕ್ಸ್‌ಗಳನ್ನು ಹೊಂದಿದೆ. ಅಲ್ಲದೇ ಈ ಬೈಕ್‌ ಮುಂಬದಿಯಲ್ಲಿ 240mm ಡಿಸ್ಕ್ ಇದ್ದು, ಹಿಂಬದಿಯಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಇದರಲ್ಲಿ ಏರ್ ಕೂಲ್ಡ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಗ್ರಾಫಿಕ್ಸ್ ವಿನ್ಯಾಸವನ್ನು ಬದಲಾಯಿಸಲಾಗಿದೆ. 
 
ಇದೀಗ ಮಾರುಕಟ್ಟೆಯಲ್ಲಿರುವ ಹೊಸ ಮಾದರಿಯ ಬೈಕುಗಳು ವಿಭಿನ್ನ ಬಣ್ಣಗಳಲ್ಲಿದ್ದು, ಕಪ್ಪು, ಅಥ್ಲೆಟಿಕ್ ಬ್ಲೂ ಮೆಟ್ಯಾಲಿಕ್, ಇಂಪಿರಿಯಲ್ ರೆಡ್ ಮೆಟ್ಯಾಲಿಕ್, ಗೆನಿ ಗ್ರೇ ಮೆಟ್ಯಾಲಿಕ್ ಮತ್ತು ಪರ್ಲ್ ಸೈರೆನ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ