ಗುಳೆ ಹೋದವರ ಬಗ್ಗೆ ಕೇಂದ್ರ ಸಚಿವ ಬರೆದ ಪತ್ರದಲ್ಲೇನಿದೆ ಗೊತ್ತಾ?
ಮಂಗಳವಾರ, 27 ನವೆಂಬರ್ 2018 (16:32 IST)
ಸಾಮಾನ್ಯವಾಗಿ ಕಡುಬಡವರು, ನಿರ್ಗತಿಕರು ದುಡಿಯಲು ಗುಳೆ ಹೋಗುತ್ತಾರೆ. ಆದರೆ ಇವರಿಗೆ ಸಿಗುವ ಸೌಲಭ್ಯಕ್ಕೆ ಕತ್ತರಿ ಹಾಕುವಂತೆ ಕೇಂದ್ರ ಸಚಿವರೊಬ್ಬರು ಪತ್ರ ಬರೆದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ದುಡಿಯಲು ಗುಳೇ ಹೋದ ಜನರ ಮತದಾರರ ಪಟ್ಟಿ ರದ್ದುಗೊಳಿಸುವಂತೆ ಕೇಂದ್ರ ಸಚಿವರ ಪತ್ರ ಬರೆದಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ.
ಕೇಂದ್ರ ಸಚಿವ ರಮೇಶ ಜಿಗಜಿಣಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸಚಿವರ ಪತ್ರದ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಳೇ ಹೋದವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಕೈ ಬಿಡುತ್ತಿರುವ ಹಿನ್ನಲೆ ಪ್ರತಿಭಟನೆ ಹಾದಿ ತುಳಿದಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಕೇಂದ್ರ ಸಚಿವರ ಪತ್ರವನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಾಯಿತು. ತಕ್ಷಣ ಸಂಸದ ಜಿಗಜಿಣಗಿ ಕ್ಷಮೆಯಾಚಿಸಿ, ಪತ್ರ ಮರಳಿ ಪಡೆಯಬೇಕು. ಪತ್ರ ಮರಳಿ ಪಡೆಯದಿದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ.