ಶ್ರೀರಂಗನಾಥನ ಹುಂಡಿಯಲ್ಲಿ ಇದ್ದ ಹಣವೆಷ್ಟು ಗೊತ್ತಾ?
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಹುಂಡಿಯ ಹಣ ಎಣಿಕೆ ಕಾರ್ಯ ಇಂದು ನಡೆಯಿತು.
ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಒಟ್ಟು 8 ಹುಂಡಿಗಳಲ್ಲಿ 4 ಹುಂಡಿಗಳನ್ನು ಮಾತ್ರ ಎಣಿಕೆ ಮಾಡಲಾಗಿತ್ತು.
ನಾಲ್ಕು ಹುಂಡಿಗಳಲ್ಲಿ 16,66,565 ರೂ. ಸಂಗ್ರಹವಾಗಿತ್ತು. ಇನ್ನು ಹುಂಡಿಯಲ್ಲಿ ಅಮಾನ್ಯಗೊಂಡಿರುವ 500 ಮುಖ ಬೆಲೆಯ 5 ನೋಟು ಹಾಗೂ1000 ಮುಖ ಬೆಲೆಯ ಒಂದು ನೋಟು ಜೊತೆಗೆ ವಿವಿಧ ದೇಶಗಳ 25 ಕರೆನ್ಸಿ ಕೂಡ ಸಂಗ್ರಹವಾಗಿತ್ತು.
ದೇವಾಲಯದ ಇಒ ಧನಲಕ್ಷ್ಮಿ ನೇತೃತ್ವದಲ್ಲಿ ವಿವಿಧ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಹಣ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ರು.