ಬೆಂಗಳೂರು: ಹೆಚ್ಚಿನವರು ಇದೇ ತಪ್ಪನ್ನು ಮಾಡುತ್ತಾರೆ. ದೇವಾಲಯಗಳಿಗೆ ಹೋದರೆ ಬರುವಾಗ ದಾರಿಯಲ್ಲಿ ಸಿಗುವ ನೆಂಟರು, ಆಪ್ತರ ಮನೆಗೆ ಒಮ್ಮೆ ಭೇಟಿ ನೀಡಿ ಬರುವುದು ನಮ್ಮಲ್ಲಿ ಎಲ್ಲರೂ ಮಾಡುವ ಕೆಲಸ.
ಇದರಿಂದ ಸಮಯವೂ ಉಳಿತಾಯ, ಎರಡೂ ಕೆಲಸ ಜತೆಗೇ ಆಯ್ತಲ್ಲಾ ಎನ್ನುವ ಲೆಕ್ಕಾಚಾರ. ಆದರೆ ಇದು ತಪ್ಪು. ನಾವು ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಬೇರೆಯವರ ಮನೆಗೆ ಭೇಟಿ ನೀಡಬಾರದು.
ದೇವಾಲಯಕ್ಕೆ ಭೇಟಿ ನೀಡಿದಾಗ ಸಿಗುವ ಪುಣ್ಯ ಫಲ ನಮಗೆ ಮತ್ತು ಕುಟುಂಬಕ್ಕೆ ಪ್ರಾಪ್ತಿಯಾಗಬೇಕೆಂದಿದ್ದರೆ ನೇರವಾಗಿ ಮನೆಗೇ ಬರಬೇಕು. ಬೇರೆಯವರ ಮನೆಗೆ ಹೋದರೆ ಆ ಪುಣ್ಯ ಫಲ ಆ ಮನೆಗೆ ವರ್ಗವಾಣೆಯಾಗುತ್ತದೆ ಎಂಬ ನಂಬಿಕೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ