ಮಗು ಸತ್ತಿದೆ ಎಂದು ಪತ್ನಿಗೆ ಸುಳ್ಳು ಹೇಳಿದ ಪತಿ ಬಳಿಕ ಮಗುವನ್ನು ಮಾಡಿದ್ದೇನು ಗೊತ್ತಾ?

ಬುಧವಾರ, 27 ಫೆಬ್ರವರಿ 2019 (06:24 IST)
ಹುಬ್ಬಳ್ಳಿ : ಮಗು ಸತ್ತಿದೆ ಎಂದು ಪತ್ನಿಗೆ ಸುಳ್ಳು ಹೇಳಿದ ಪತಿಯೊಬ್ಬ ಸ್ವಂತ ಮಗುವನ್ನೇ ಮಾರಾಟ ಮಾಡಿದ್ದ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.


3 ವರ್ಷಗಳ ಹಿಂದೆ ಮದುವೆಯಾಗಿದ್ದ ಸಂಜು ಮತ್ತು ಲಲಿತಾ ದಂಪತಿಗೆ ಜನವರಿ 12 ರಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದ್ದು, ಆರೋಗ್ಯವಾಗಿತ್ತು. ಆದರೆ ಪತಿ ಸಂಜು ಮಾತ್ರ  ಜೀವಂತವಾಗಿರುವ ಮಗುವನ್ನು ಮೃತಪಟ್ಟಿದೆ ಎಂದು ಪತ್ನಿಗೆ ಸುಳ್ಳು ಹೇಳಿ ನವಜಾತ ಶಿಶುವನ್ನು ಬೆಂಗಳೂರಿನವರಿಗೆ ಮಾರಾಟ ಮಾಡಿದ್ದಾನೆ.


ಆದರೆ ತಿಂಗಳ ಬಳಿಕ ಆಸ್ಪತ್ರೆಯ ದಾಖಲಾತಿ ಪರಿಶೀಲನೆ ಮಾಡಿದಾಗ ಮಗು ಜೀವಂತವಾಗಿ ಆರೋಗ್ಯವಾಗಿದೆ ಎಂದು ದೃಢೀಕರಣ ಹೊಂದಿದ್ದ ಜನನ ಪ್ರಮಾಣ ಪತ್ರ ನೀಡಿದ್ದರು. ಆಗ ಪತಿಯ ಮೇಲೆ ಅನುಮಾನಗೊಂಡ ಪತ್ನಿ, ಮಗು ಖರೀದಿಸಿದ ಮಹಿಳೆಯೊಂದಿಗೆ ಪತಿ ದೂರವಾಣಿ ಮೂಲಕ ಮಾತನಾಡಿದ ಆಡಿಯೋ ಸಹಿತ ಹುಬ್ಬಳ್ಳಿ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಾಗುತ್ತಲೇ ಆರೋಪಿ ಪತಿ ಪಾರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ